ಬೆಂಗಳೂರು : ಇಂದು ಬಿಎಸ್ ವೈ ಆಡಿಯೋ ಕ್ಲಿಪಿಂಗ್ ನ್ನು ಕಾಂಗ್ರೆಸ್ ಸುಪ್ರೀಂಕೋರ್ಟ್ ನ ಮುಂದೆ ಇಡಲಿದ್ದು, ಇದರಿಂದ ಅನರ್ಹ ಶಾಸಕರ ಎದೆಯಲ್ಲಿ ಢವಢವ ಶುರುವಾಗಿದೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ವಿಚಾರಣೆ ಮುಗಿದಿದ್ದು, ಇನ್ನು ತೀರ್ಪು ಬರುವುದೊಂದೆ ಬಾಕಿ ಇತ್ತು. ಆದರೆ ಇದೀಗ ಮೈತ್ರಿ ಸರ್ಕಾರ ಉರುಳಿಸುವ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ ಆಡೀಯೋ ಕ್ಲಿಪಿಂಗ್ ನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್ ನ ಮುಂದೆ ಇಟ್ಟು ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುವಂತೆ ಮನವಿ ಮಾಡಲಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಇಂದು 10.30ಕ್ಕೆ ಸುಪ್ರೀಂಕೋರ್ಟ್ ನಲ್ಲಿ ನ್ಯಾ. ರಮಣ ನೇತೃತ್ವದ ಪೀಠದಲ್ಲಿ ಈ ಆಡಿಯೋ ಬಗ್ಗೆ ಪ್ರಸ್ತಾಪ ಮಾಡಲಿದ್ದು, ಇದು ಅನರ್ಹ ಶಾಸಕರ ಸಂಕಷ್ಟಕ್ಕೆ ಕಾರಣವಾಗಿದೆ.