Publish Date: Sat, 23 Jan 2021 (08:02 IST)
Updated Date: Sat, 23 Jan 2021 (08:03 IST)
ತಿರುಚ್ಚಿ : 29 ವರ್ಷದ ಯುವಕನೊನ್ನ ತನ್ನ 17 ವರ್ಷದ ಮಲಮಗಳಿಗೆ ಕಿರುಕುಳ ನೀಡಿದ ಘಟನೆ ತಮಿಳುನಾಡಿನ ತಿರುಚ್ಚಿ ನಗರದಲ್ಲಿ ನಡೆದಿದೆ.
ತನ್ನ ಪತಿ ತೀರಿಕೊಂಡ ಬಳಿಕ 40 ವರ್ಷದ ಮಹಿಳೆ 29 ವರ್ಷದ ಯುವಕನನ್ನು ಮದುವೆಯಾಗಿದ್ದಾಳೆ. ಆದರೆ ಯುವಕ ಆಕೆಯ ಮೊದಲನೆ ಪತಿಯ 16ವರ್ಷದ ಮಗಳನ್ನು ಮದುವೆಯಾಗುವುದಾಗಿ ಪೀಡಿಸುತ್ತಿದ್ದ. ಇದಕ್ಕೆ ಹುಡುಗಿ ಮತ್ತು ಆಕೆಯ 17 ವರ್ಷದ ಸಹೋದರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಅವರ ನಡುವೆ ಜಗಳ ನಡೆದು ಯುವಕ 17 ವರ್ಷದ ಮಲಮಗಳ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಮಲಮಗಳು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಮಲತಂದೆಯನ್ನು ಬಂಧಿಸಿದ್ದಾರೆ.