Publish Date: Fri, 26 Aug 2022 (16:23 IST)
Updated Date: Fri, 26 Aug 2022 (16:25 IST)
ಮುಂಬೈ: ಬಿಜೆಪಿ ನಾಯಕಿ, ನಟಿ ಸೊನಾಲಿ ಪೋಘಟ್ ಅನುಮಾಸ್ಪದ ಸಾವಿಗೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ನಟಿಗೆ ಸಾವಿಗೆ ಮುನ್ನ ಡ್ರಗ್ಸ್ ನೀಡಲಾಗಿತ್ತು. ಇದೇ ಕಾರಣಕ್ಕೆ ಅವರ ಸಾವಾಗಿರಬಹುದು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಅನುಮಾನಿಸಲಾಗಿದೆ. ಅಲ್ಲದೆ ಅವರ ದೇಹದಲ್ಲಿ ಗಾಯದ ಗುರುತೂ ಇತ್ತು.
ಹೀಗಾಗಿ ಇದು ಕೊಲೆ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.