ಹರಿದ್ವಾರ : ಆಂಟಿ ಜೊತೆಗೆ ಪ್ರೇಮದಾಟ ಆಡಲು ಅಡ್ಡಿಯಾದ ಅಂಕಲ್ ನನ್ನೇ ಸೋದರಳಿಯ ಕೊಲೆ ಮಾಡಿದ ಘಟನೆ ಹರಿದ್ವಾರದಲ್ಲಿ ನಡೆದಿದೆ.
ಆಂಟಿ ಮೇಲೆ ಸೋದರಳಿಯನೊಬ್ಬನಿಗೆ ಪ್ರೀತಿ ಶುರುವಾಗಿದೆ. ಇದಕ್ಕೆ ಆಂಟಿ ಕೂಡ ಒಪ್ಪಿಗೆ ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆ. ಒಮ್ಮೆ ಅಂಕಲ್ ಮನೆಯಲ್ಲಿರದ ವೇಳೆ ಇಬ್ಬರು ಒಂದಾಗಿದ್ದಾರೆ. ಆ ವೇಳೆಗೆ ಸರಿಯಾಗಿ ಅಂಕಲ್ ಮನೆಗೆ ಬಂದಿದ್ದಾರೆ. ಹಾಸಿಗೆ ಮೇಲೆ ಪತ್ನಿ ಜೊತೆಗಿದ್ದ ಸೋದರಳಿಯನನ್ನು ನೋಡಿ ದಂಗಾದ ಅಂಕಲ್ ಗಲಾಟೆ ಮಾಡಿದ್ದಾನೆ.
ಆಗ ಈ ವಿಚಾರ ಹೊರಗೆ ತಿಳಿಯಬಾರದೆಂದು ಸೋದರಳಿಯ ತನ್ನ ಸ್ನೇಹಿತನನ್ನು ಮನೆಗೆ ಕರೆಯಿಸಿ ಅಂಕಲ್ ನನ್ನು ಹತ್ಯೆ ಮಾಡಿದ್ದಾನೆ. ಇದಕ್ಕೆ ಚಿಕ್ಕಮ್ಮ ಕೂಡ ಸಹಕರಿಸಿದ್ದಾಳೆ. ಬಳಿಕ ಈ ಕೊಲೆ ವಿಚಾರ ತಿಳಿಯಬಾರದೆಂದು ಪತಿ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾಳೆ. ಆದರೆ ವಿಚಾರಣೆ ವೇಳೆ ಈ ಮೂವರು ಸಿಕ್ಕಿಬಿದಿದ್ದು, ಇದೀಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.