Publish Date: Thu, 04 Apr 2019 (10:06 IST)
Updated Date: Thu, 04 Apr 2019 (10:08 IST)
ನವದೆಹಲಿ: ಮಕ್ಕಳು ದೊಡ್ಡವರಾದ ಮೇಲೆ ಅವರ ಜತೆಗೆ ಸೆಲ್ಫೀ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುವುದೂ ಖುಷಿಯ ವಿಚಾರವೇ. ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರನ ಜತೆಗಿರುವ ಫೋಟೋ ಒಂದು ವೈರಲ್ ಆಗಿದೆ.
ಪುತ್ರ ಮತ್ತು ಪತಿಯ ಜತೆಗಿರುವ ಫೋಟೋಗಳನ್ನು ಆಗಾಗ ಸ್ಮೃತಿ ಇರಾನಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ಇದೀಗ ಪುತ್ರನ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಎಷ್ಟು ಕಾಟ ಕೊಟ್ಟೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಮಗ ಸ್ನೇಹಿತನಿಗಾಗಿ ಕ್ಲೀನ್ ಶೇವ್ ಮಾಡಿಕೊಂಡಾಗ ಆತನಿಗೆ ಕಾಟ ಕೊಟ್ಟು ಸೆಲ್ಫೀ ಕ್ಲಿಕ್ಕಿಸಿಕೊಂಡೆ ಎಂದು ಸ್ಮೃತಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿ ಲೈಕ್ಸ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ