ಮುಂಬೈ: ಆನ್ ಲೈನ್ ಖರೀದಿ ಎಡವಟ್ಟಿನಿಂದ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಸ್ವಿಗಿ ಅಪ್ ನಲ್ಲಿ ಖರೀದಿ ಮಾಡಲು ಹೋಗಿ ವ್ಯಕ್ತಿಯೊಬ್ಬರು ತಲೆ ಕೆಡಿಸಿಕೊಂಡು ಕೂರುವ ಪರಿಸ್ಥಿತಿ ಎದುರಾಗಿದೆ.
ಪ್ರಣಯ್ ಲೋಯಾ ಎಂಬವರು ಸ್ವಿಗಿ ಆಪ್ ಮೂಲಕ ತಮಗೆ ಬೇಕಾಧ ವಸ್ತುಗಳ ಖರೀದಿಗೆ ಆರ್ಡರ್ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಅದು ಕ್ಯಾನ್ಸಲ್ ಆಗಿದೆ ಎಂದು ಸಂದೇಶ ಬಂತು. ಮತ್ತೊಮ್ಮೆ ಈ ರೀತಿ ಮಾಡಿದಾಗಲೂ ಅದೇ ರೀತಿ ಬಂತು. ಹಾಗಿದ್ದರೂ ಅವರ ಮತ್ತೆ ಮತ್ತೆ ಮಾಡಿದಾಗ ಅದೇ ಸಂದೇಶ ಬಂತು. ಕೊನೆಗೆ ಸ್ವಿಗಿ ಆಪ್ ನ್ನೇ ಆಫ್ ಮಾಡಿ ಬೇರೊಂದು ಆಪ್ ಮೂಲಕ ತಮಗೆ ಬೇಕಾದ ವಸ್ತುಗಳಿಗೆ ಆರ್ಡರ್ ಕೊಟ್ಟರು.
ಕೆಲವು ಕ್ಷಣಗಳ ನಂತರ ಫೋನ್ ಗಳು ಬರಲು ಆರಂಭವಾಯಿತು. ಮನೆ ಮುಂದೆ ಆರು ಮಂದಿ ಡೆಲಿವರಿ ಬಾಯ್ ಅವರು ಆರ್ಡರ್ ಕೊಟ್ಟ ವಸ್ತುಗಳನ್ನು ಹೊತ್ತು ನಿಂತಿದ್ದರು! ಅನಿವಾರ್ಯವಾಗಿ ಎಲ್ಲವನ್ನೂ ಅವರು ಸ್ವೀಕರಿಸಬೇಕಾಯಿತು. ಬಳಿಕ ತಮಗಾದ ಪಜೀತಿ ಬಗ್ಗೆ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್ ನಲ್ಲಿ ಹಂಚಿಕೊಂಡರು.
ನನ್ನ ಬಳಿ ಈಗ 20 ಲೀ. ಹಾಲು, ಆರು ಕೆ.ಜಿ. ದೋಸೆ ಹಿಟ್ಟು, 6 ಪ್ಯಾಕೆಟ್ ಪೈನ್ಯಾಪಲ್ ಇದೆ. ಇದನ್ನು ನಾನು ಏನು ಮಾಡಲಿ ನೀವೇ ಹೇಳಿ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಟ್ವೀಟ್ ಗಮನಿಸಿದ ಸ್ವಿಗಿ ಪ್ರತಿಕ್ರಿಯಿಸಿದ್ದು, ನಿಮ್ಮ ಆರ್ಡರ್ ನಂಬರ್ ಶೇರ್ ಮಾಡಿ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದಿದೆ. ಆದರೆ ಪ್ರಣಯ್ ಟ್ವೀಟ್ ಗೆ ಹಲವರು ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.