ಪ್ರಧಾನಿ, ಸಿಎಂ ಪದಚ್ಯುತಿ ಮಸೂದೆ ಮಂಡನೆಗೆ ಸಿದ್ದರಾಮಯ್ಯ ವಿರೋಧ: ನಿಮಗ್ಯಾಕೆ ಭಯ ಸರ್ ಎಂದ ನೆಟ್ಟಿಗರು

Krishnaveni K
ಗುರುವಾರ, 21 ಆಗಸ್ಟ್ 2025 (08:36 IST)
ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ನಿನ್ನೆ ಸಂಸತ್ ನಲ್ಲಿ ಪ್ರಧಾನಿ, ಸಿಎಂ ಪದಚ್ಯುತಿ ಮಸೂದೆ ಮಂಡಿಸುತ್ತಿದ್ದಂತೇ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರೋಧಿಸಿ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ನಿಮಗ್ಯಾಕೆ ಭಯ ಸರ್ ಎಂದಿದ್ದಾರೆ.

ಕ್ರಿಮಿನಲ್ ಆರೋಪಗಳ ಮೇಲೆ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಮತ್ತು ಸಚಿವರುಗಳು ಬಂಧನವಾದರೆ ಅವರ ಹುದ್ದೆಯಿಂದ ತೆಗೆದು ಹಾಕುವ ಐತಿಹಾಸಿಕ ಮಸೂದೆಯನ್ನು ನಿನ್ನೆ ಗೃಹಸಚಿವ ಅಮಿತ್ ಶಾ ಮಂಡಿಸಿದ್ದಾರೆ.

ಲೋಕಸಭೆಯಲ್ಲಿ ಅಮಿತ್ ಶಾ ಮಸೂದೆ ಮಂಡಿಸುತ್ತಿದ್ದಂತೇ ವಿಪಕ್ಷಗಳು ಸಿಟ್ಟು ನೆತ್ತಿಗೇರಿತ್ತು. ಇನ್ನು, ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮೂಲಕ ಕೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ. ಈಗಾಗಲೇ ಇಡಿ, ಐಟಿ, ಸಿಬಿಐ ಇಲಾಖೆಯನ್ನು ತನ್ನ ಕೈಗೊಂಬೆಯಂತೆ ಕೇಂದ್ರ ಕುಣಿಸುತ್ತಿದೆ. ವಿರೋಧ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ದಾಳಿ ನಡೆಸುತ್ತಿದೆ.

ಇದೀಗ ಇದೇ ನೆಪ ಮಾಡಿಕೊಂಡು ವಿರೋಧ ಪಕ್ಷಗಳು ಆಡಳಿತದಲ್ಲಿರುವ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸಿ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರವಿದು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬಹುತೇಕ ಕಾಂಗ್ರೆಸ್ ನಾಯಕರು ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಸಿಎಂ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಿಮಗ್ಯಾಕೆ ಭಯ ಸರ್? ನೀವು ತಪ್ಪು ಮಾಡಿಲ್ಲದೇ ಇದ್ದರೆ ಪದಚ್ಯುತಿ ಮಾಡುವ ಕಾನೂನು ತಂದರೆ ನಿಮಗೆ ಭಯವೇಕೆ? ತಪ್ಪು ಮಾಡಿದವರು ಭಯ ಪಡಬೇಕು. ಇಂತಹದ್ದೊಂದು ಕಾನೂನಿನಿಂದಾದರೂ ಕಳಂಕಿತರು ಉನ್ನತ ಹುದ್ದೆಯಲ್ಲಿ ಮುಂದುವರಿಯುವುದು ತಪ್ಪಿ ರಾಜಕೀಯ ಸ್ವಚ್ಛವಾಗಲಿ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮ್ಮ ಪ್ರೀತಿಗೆ ಪೋಷಕರ ವಿರೋಧದ ಭಯ, ರೈಲಿಗೆ ತಲೆಯಿಟ್ಟು ಪ್ರೇಮಿಗಳು ಸಾವು

ಮಹಾರಾಷ್ಟ್ರ ಭಾರೀ ಮಳೆ ಪರಿಣಾಮ, ಕಲಬುರಗಿಯ ರೈತರಿಗೆ ಅಪಾರ ಪ್ರಮಾಣದ ಬೆಳೆ ಹಾನಿ

ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಮಾಡುವಂತಿಲ್ಲವೆಂದು ಎಸ್‌ ಎಲ್‌ ಭೈರಪ್ಪ ವಿಲ್‌

ಬಿಜೆಪಿಯ ಗುಲಾಮರಾಗಲು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದೇವಾ: ಅರವಿಂದ್ ಕೇಜ್ರಿವಾಲ್‌

ಇಂದೋರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಕಚ್ಚಿದ ಇಲಿ, ಎಷ್ಟು ಜನರ ಕೆಲಸ ಹೋಯ್ತು ಗೊತ್ತಾ

ಮುಂದಿನ ಸುದ್ದಿ
Show comments