ನವದೆಹಲಿ : ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ಧಾರ್ಮಿಕ ಕೋನದಲ್ಲಿ ಬಿಜೆಪಿ ಬಿಂಬಿಸುತ್ತಿದೆ. ಆದರೆ ಇದು ʼಲವ್ ಜಿಹಾದ್ʼ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಬಿಜೆಪಿ ರಾಜಕೀಯ ಸಂಪೂರ್ಣ ತಪ್ಪಾಗಿದೆ. ಇದು ಲವ್ ಜಿಹಾದ್ನ ಸಮಸ್ಯೆಯಲ್ಲ. ಮಹಿಳೆಯ ಮೇಲಿನ ಶೋಷಣೆ ಮತ್ತು ನಿಂದನೆಯ ವಿಷಯವಾಗಿದೆ. ಈ ದೃಷ್ಟಿಕೋನದಲ್ಲಿ ಪ್ರಕರಣವನ್ನು ನೋಡಬೇಕು ಮತ್ತು ಹತ್ಯೆಯನ್ನು ಖಂಡಿಸಬೇಕು ಎಂದು ಓವೈಸಿ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಸೂಟ್ಕೇಸ್ನಲ್ಲಿ ಇಟ್ಟುಕೊಂಡಿರುವ ಅಜಂಗಢ ಘಟನೆಯನ್ನು ನೆನಪಿಸಿಕೊಂಡ ಓವೈಸಿ, ಇಂತಹ ಘಟನೆಗಳು ದುಃಖಕರವಾಗಿವೆ. ಆದರೆ ಇದನ್ನು ಹಿಂದೂ-ಮುಸ್ಲಿಂ ಕೋನದಲ್ಲಿ ರಾಜಕೀಯಗೊಳಿಸಬಾರದು ಎಂದಿದ್ದಾರೆ.