Select Your Language

Notifications

webdunia
webdunia
webdunia
webdunia

Shocking video: ಮೀರತ್ ನ ಮುಸ್ಕಾನ್ ನನ್ನೂ ಮೀರಿಸಿದ ಮಹಿಳೆ: ಗಂಡನನ್ನು ಕೊಂದು ಶವ ಎಲ್ಲಿ ಹೂತು ಹಾಕಿದ್ಳು ಗೊತ್ತಾ

Agra Rubin husband murder
Photo Credit: X
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಮುಸ್ಕಾನ್ ಪ್ರಕರಣದ ಭೀಕರತೆ ಮಾಸುವ ಮುನ್ನವೇ, ಈಗ ಆಗ್ರಾದಿಂದ ಇಂತಹುದೇ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ತನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಮನೆಯ ಬಾತ್ ರೂಮ್‌ನ ಟೈಲ್ಸ್ ಅಡಿಯಲ್ಲಿ ಹೂತು ಹಾಕಿ, ಸ್ವತಃ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿ ಕಾಣೆಯಾಗಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ ರೂಬಿ ಶರ್ಮಳ ಅಸಲಿ ಮುಖ ಈಗ ಬಯಲಾಗಿದೆ.
 
ಆಗ್ರಾದ ನಿವಾಸಿಯಾದ ಸುರೇಂದರ್ ಶರ್ಮಾ ಕಳೆದ 45 ದಿನಗಳಿಂದ ನಾಪತ್ತೆಯಾಗಿದ್ದರು. ಪತಿ ನಾಪತ್ತೆಯಾದ ತಕ್ಷಣ ರೂಬಿ ಶರ್ಮಾ ತಾನೇ ಮುಂಚೂಣಿಗೆ ನಿಂತು ಪೊಲೀಸ್ ಠಾಣೆಯಲ್ಲಿ 'ಮಿಸ್ಸಿಂಗ್ ಡೈರಿ' ದಾಖಲಿಸಿದ್ದಳು. ಪೊಲೀಸರು ಸುರೇಂದರ್ ಪತ್ತೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ತೀವ್ರ ಹುಡುಕಾಟ ನಡೆಸುತ್ತಿದ್ದರು.
 
ಸಿಸಿಟಿವಿ ಕ್ಯಾಮೆರಾದಿಂದ ಸಿಕ್ಕ ಸುಳಿವುಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಒಂದು ಪ್ರಮುಖ ತಾಂತ್ರಿಕ ಲೋಪ ಕಂಡುಬಂದಿದೆ. ಸುರೇಂದರ್ ಶರ್ಮಾ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಪತ್ನಿ ಹೇಳಿದ್ದ ದಿನದ ಸುತ್ತಮುತ್ತಲಿನ ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸುರೇಂದರ್ ಮನೆಯಿಂದ ಹೊರಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿರಲಿಲ್ಲ. ಮನೆಯೊಳಗೆ ಬಂದ ವ್ಯಕ್ತಿ ಹೊರಗೆ ಹೋಗದೇ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ. ಈ ಸಿಸಿಟಿವಿ ಸಾಕ್ಷ್ಯವು ಪತ್ನಿ ರೂಬಿ ಮೇಲಿನ ಅನುಮಾನವನ್ನು ದುಪ್ಪಟ್ಟು ಮಾಡಿತು.
 
ಅನುಮಾನದ ಆಧಾರದ ಮೇಲೆ ಪೊಲೀಸರು ರೂಬಿ ಶರ್ಮಾಳನ್ನು ಠಾಣೆಗೆ ಕರೆತಂದು ಕಠಿಣ ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಆಕೆ, ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಡುತ್ತಿದ್ದಂತೆ ಕಂಗೆಟ್ಟು ತನ್ನ ಪಾಪದ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
 
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾನೇ ಪತಿ ಸುರೇಂದರ್‌ನನ್ನು ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ಯಾರಿಗೂ ಅನುಮಾನ ಬಾರದಂತೆ ಶವವನ್ನು ಮನೆಯ ಬಾತ್ ರೂಮ್ ನೆಲದ ಅಡಿಯಲ್ಲಿ ಹೂತು ಹಾಕಿ, ಅದರ ಮೇಲೆ ಹೊಸದಾಗಿ ಟೈಲ್ಸ್‌ಗಳನ್ನು ಅಳವಡಿಸಿ ಮುಚ್ಚಿರುವುದಾಗಿ ತಿಳಿಸಿದ್ದಾಳೆ.
 
ಪ್ರಸ್ತುತ ಮ್ಯಾಜಿಸ್ಟ್ರೇಟ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡದ ಸಮ್ಮುಖದಲ್ಲಿ ಬಾತ್ ರೂಮ್‌ನ ಟೈಲ್ಸ್‌ಗಳನ್ನು ಒಡೆದು ಸುರೇಂದರ್ ಶರ್ಮಾ ಅವರ ಕೊಳೆತ ಶವವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೇವಲ 45 ದಿನಗಳ ಅಂತರದಲ್ಲಿ ಯುಪಿಯಲ್ಲಿ ನಡೆದ ಈ ಎರಡನೇ ಸರಣಿ ಮಾದರಿಯ ಕೊಲೆ ಇಡೀ ರಾಜ್ಯವನ್ನು ನಡುಗಿಸಿದೆ.
pic.twitter.com/bPOgfsdPzZ

 

— ocean jain (@ocjain4) July 3, 2026

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮದಲ್ಲಿ ಇನ್ನು ಇವರು ಕಳ್ಳತನ ಮಾಡಲ್ಲ: ಕದಿಯಲು ಬಂದವರಿಗೆ ಕಾರ್ಟೂನ್ ವೇಷ ಹಾಕಿ ಅಯ್ಯೋ ಅನಿಸಿದ್ರು Video