ಮುಂಬೈ : ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಕಪ್ತಾನ್ಸಿಂಗ್ ನಾಯಕ್(37) ಎಂದು ಗುರುತಿಸಲಾಗಿದೆ. ಅಂಜಲಿ ಚವ್ಹಾಣ್ ನಾಯಕ್(32) ಮತ್ತು ಸೋದರಮಾವ ಗಜೇಂದ್ರ ಚಿತ್ತಾರಸಿಂಗ್ ನಾಯಕ್(36) ಸೇರಿ ಕಪ್ತಾನ್ಸಿಂಗ್ ನಾಯಕ್ನನ್ನು ಕೊಂದಿದ್ದಾರೆ. ಪ್ರಸ್ತುತ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಪ್ತಾನ್ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್-ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತ ವ್ಯಕ್ತಿ ದೆಹಲಿ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದರು. ಕಪ್ತಾನ್ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟ ಇತ್ತು.
ಅಲ್ಲದೆ ಕುಡಿದು ಬಂದು ದಿನನಿತ್ಯ ಅಂಜಲಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಅಂಜಲಿ ಭಾನುವಾರ ಮಧ್ಯಾಹ್ನ, ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ಈ ಸಂಬಂಧ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್ನನ್ನು ಹೊಡೆದು ಕೊಂದಿದ್ದಾರೆ.