Publish Date: Tue, 25 Jan 2022 (06:23 IST)
Updated Date: Tue, 25 Jan 2022 (08:25 IST)
ಮುಂಬೈ : ಆಟೋರಿಕ್ಷಾ ಚಾಲಕನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿದ್ದು, ಚಾಲಕ ಸಾವಿಗೀಡಾದ ಘಟನೆ ಉತ್ತರ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ.
ದಾಬುನಗರದಲ್ಲಿ 10 ದಿನಗಳ ಹಿಂದೆ ನಿಲ್ಲಿಸಿದ್ದ ತಮ್ಮ ಆಟೋರಿಕ್ಷಾವನ್ನು ಒಮ್ಮೆ ನೋಡಿ ಬರಲು ಚಾಲಕ ಶಾರುಕ್ ಶೇಖ್ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಳ್ಳನೆಂದು ಭಾವಿಸಿ ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿಯೇ ಸಮೀಪದ ಸ್ಥಳವೊಂದರಲ್ಲಿ ಎಸೆದು ಹೋಗಲಾಗಿತ್ತು.
ಈ ಬಗ್ಗೆ ದಾರಿಹೋಕರು ನೀಡಿದ್ದ ಮಾಹಿತಿಯ ಮೇರೆಗೆ ಶಾರುಕ್ ಅವರನ್ನು ಠಾಣೆಗೆ ಕರೆತಂದು ದರೋಡೆ ಪ್ರಕರಣ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಜಾಮೀನು ಪಡೆದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Ramya kosira
Publish Date: Tue, 25 Jan 2022 (06:23 IST)
Updated Date: Tue, 25 Jan 2022 (08:25 IST)