ನವದೆಹಲಿ: ಪ್ರಧಾನಿ ಮೋದಿ ಕನಸಿನ ಯೋಜನೆಯಾದ ಬುಲೆಟ್ ಟ್ರೈನ್ ಕಾಮಗಾರಿಗೆ ಇಂದು ಚಾಲನೆ ಸಿಕ್ಕಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಶಿವಸೇನೆ ಟೀಕಿಸಿದೆ.
ಇದು ಪ್ರಧಾನಿ ಮೋದಿಯವರ ‘ವೈಭವೋಪೇತ ಕನಸು’ ಎಂದು ಟೀಕಿಸಿದೆ. ಅಷ್ಟೇ ಅಲ್ಲದೆ, ಇದು ಅನಗತ್ಯ ಯೋಜನೆ ಎಂದು ಹೇಳಿದೆ.
ಶಿವಸೇನೆ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಮುಂಬೈ ಲೋಕಲ್ ಟ್ರೈನ್ ನಲ್ಲೇ ಹಲವು ಸಮಸ್ಯೆಗಳಿವೆ. ದೇಶದ ಹಲವು ಮೂಲಭೂತ ಸಮಸ್ಯೆಗಳಿಗೇ ಪರಿಹಾರ ಸಿಕ್ಕಿಲ್ಲ. ಹಾಗಿರುವಾಗ ಬುಲೆಟ್ ರೈಲಿನಂತಹ ಐಷಾರಾಮಿ ಯೋಜನೆಗಳ ಅಗತ್ಯವಿತ್ತೇ ಎಂದು ಶಿವಸೇನೆ ಪ್ರಶ್ನಿಸಿದೆ.