ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೂರಿ ಇಂದು ಅಹಮ್ಮದಾಬಾದ್-ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 1,10,000 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, 2022 ರ ವೇಳೆಗೆ ಅಂತ್ಯವಾಗುವ ನಿರೀಕ್ಷೆಯಿದೆ.
ಜಪಾನ್ ಬಹುಪಾಲು ಹಣವನ್ನು ಈ ಯೋಜನೆಗೆ ಸಾಲವಾಗಿ ನೀಡುತ್ತಿರುವುದರಿಂದ ಆ ದೇಶದ ಪ್ರಧಾನಿ ಉಪಸ್ಥಿತಿ ವಿಶೇಷವಾಗಲಿದೆ. ಬುಲೆಟ್ ಟ್ರೈನ್ ಆರಂಭವಾದರೆ ಸಂಚಾರದ ಅವಧಿ ತೀರಾ ಕಡಿಮೆಯಾಗಲಿದೆ.