Publish Date: Sat, 14 Oct 2017 (09:26 IST)
Updated Date: Sat, 14 Oct 2017 (09:28 IST)
ನವದೆಹಲಿ: ಬಿಜೆಪಿಯಲ್ಲಿ ಶೇ.80 ಮಂದಿ ಹಿರಿಯ ಎಲ್ ಕೆ ಅಡ್ವಾಣಿ ರಾಷ್ಟ್ರಪತಿಯಾಗಬೇಕೆಂದು ಬಯಸಿದ್ದರು ಎಂದು ಹೇಳಿರುವ ಬಿಜೆಪಿ ನಾಯಕ ಶತ್ರುಘ್ನಾ ಸಿನ್ಹಾ ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಟಾಂಗ್ ಕೊಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ ಸಂಸತ್ ನಲ್ಲಿ ಇಬ್ಬರೇ ಸಂಸದರಿರುವಾಗ ಪಕ್ಷ ಸೇರಿರುವ ತಾನು ಇಬ್ಬರೇ ನಿರ್ಧರಿಸುವ ಕಾಲದಲ್ಲಿಯೂ ಇದ್ದೇನೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಟಾಂಗ್ ಕೊಟ್ಟಿದ್ದಾರೆ.
ಅಲ್ಲದೆ, ಕೆಲ ದಿನಗಳ ಹಿಂದೆ ತಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಯತ್ನಿಸಿ ವಿಫಲನಾದೆ. ಆದರೆ ಇತ್ತೀಚೆಗೆ ನಡೆದ ತನ್ನ ಪುತ್ರನ ವಿವಾಹಕ್ಕೆ ಆಗಮಿಸಿದ ಮೋದಿಜಿಗೆ ಧನ್ಯವಾದಗಳು ಎಂದಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ