ಬಿಜೆಪಿ ಪಕ್ಷವನ್ನು ಸದಾ ಇಕ್ಕಟ್ಟಿಗೆ ಸಿಲುಕಿಸುವುದೇ ಹಿರಿಯ ಮುಖಂಡ ಶತ್ರುಘ್ನ ಸಿನ್ಹಾ ಕಾಯಕವಾಗಿದೆ. ಇದೀಗ, ಮಾಜಿ ಪ್ರದಾನಿ ಇಂದಿರಾಗಾಂಧಿ ಇದ್ದಿದ್ರೆ ಕಾಂಗ್ರೆಸ್‌ನಲ್ಲಿರುತ್ತಿದ್ದೆ ಎಂದು ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳುವ ಮೂಲಕ ಸಿನ್ಹಾ, ಮತ್ತೊಮ್ಮೆ ಬಿಜೆಪಿ ಪಕ್ಷದ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಸಂಸದರಾದ ಸಿನ್ಹಾ ಮಾತನಾಡಿ, ಕೇವಲ ಇಬ್ಬರು ಅಥವಾ ನಾಲ್ವರು ಮುಖಂಡರಿಂದಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಒಂದು ವೇಳೆ, ಇಂದಿರಾ ಗಾಂಧಿ ಬದುಕಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿರುತ್ತಿದ್ದೆ ಎಂದು ತಿಳಿಸಿದ್ದಾರೆ.
ಎನಿಥಿಂಗ್ ಬಟ್ ಖಾಮೋಶ್ ತಮ್ಮ ಆತ್ಮಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿನ್ಹಾ, ಇಂದಿರಾ ಗಾಂಧಿ ತಮ್ಮನ್ನು ತುಂಬಾ ಗೌರವಿಸುತ್ತಿದ್ದರು. ಇತರ ರಾಜಕಾರಣಿಗಳಿಗಿಂತ ಅವರು ಭಿನ್ನವಾಗಿದ್ದರಿಂದ ತಾವು ಕೂಡಾ ಇಂದಿರಾ ಅವರನ್ನು ತುಂಬಾ ಗೌರವಿಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸುಬೋಧ್ ಕಾಂತ್ ಸಹಾಯ್, ನನಗೆ ರಾಜಕೀಯದ ಎಲ್ಲಾ ಆಯಾಮಗಳನ್ನು ಕಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ