ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

Krishnaveni K
ಗುರುವಾರ, 26 ಜೂನ್ 2025 (20:52 IST)
Photo Credit: X
ನವದೆಹಲಿ: ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾರಲು ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಗೂಡಾರ್ಥವಿರುವ ಟ್ವೀಟ್ ಮಾಡಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ಹಾಗಿದ್ದರೆ ಮುಂದಿನ ಬಾರಿ ಬಿಜೆಪಿ ಪಕ್ಕಾ ಎಂದಿದ್ದಾರೆ.

ಶಶಿ ತರೂರ್ ಕಾಂಗ್ರೆಸ್ ಸಂಸದ. ಆದರೆ ಸದ್ಯಕ್ಕೆ  ಮೋದಿ ಜೊತೆ ನಿಕಟವಾಗಿರುವ ಶಶಿ ತರೂರ್ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮುನಿಸಿಕೊಂಡಿದೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಇದೇ ಕಾರಣಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ತರೂರ್ ಹಾರಲು ಪರ್ಮಿಷನ್ ಬೇಡ ಎಂದಿದ್ದು ಅದೇ ಕಾರಣಕ್ಕೆ ಎನ್ನಲಾಗುತ್ತಿದೆ.

ಇದಕ್ಕೀಗ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ಮಿಸ್ಟರ್ ತರೂರ್ ಮುಂದಿನ ಸಲ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ ಎಂದಿದ್ದಾರೆ. ಮತ್ತೆ ಕೆಲವರು ಹಾಗಿದ್ದರೆ ಈಗಾಗಲೇ ಆರ್ ಎಸ್ಎಸ್ ನತ್ತ ಹಾರಿ ಆಗಿದೆ ಬಿಡಿ ಎಂದು ಕಾಲೆಳೆದಿದ್ದಾರೆ.

ಇನ್ನು ಬಿಜೆಪಿ ಸಮರ್ಥಕರಂತೂ ಶಶಿ ತರೂರ್ ತಪ್ಪಾದ ಜಾಗದಲ್ಲಿದ್ದೀರಿ. ಬನ್ನಿ ಬಿಜೆಪಿಗೆ ಎಂದು ಆಹ್ವಾನವಿತ್ತಿದ್ದಾರೆ. ತರೂರ್ ಬಿಜೆಪಿ ಸೇರುತ್ತಾರೋ ಬಿಡುತ್ತಾರೋ ಆದರೆ ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ಅವರು ಇತ್ತೀಚೆಗೆ ಮೋದಿಗೆ ಹತ್ತಿರವಾಗುತ್ತಿರುವುದು ನೋಡಿದರೆ ಇದು ನಿಜವಾದರೂ ಆಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಲೈಮ್ಯಾಕ್ಸ್‌ ಹಂತ ತಲುಪಿದ ಧರ್ಮಸ್ಥಳ ಬುರುಡೆ ಕೇಸ್‌: ಎಸ್‌ಐಟಿ ಚಾರ್ಜ್‌ಶೀಟ್‌ನತ್ತ ಎಲ್ಲರ ಚಿತ್ತ

Karur Stampede: ಸ್ವತಂತ್ರ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ನಟ ವಿಜಯ್‌ ಪಕ್ಷ

ಪಟಾಕಿ ಕಾರ್ಖಾನೆಯಲ್ಲಿ ಮತ್ತೊಂದು ದುರಂತ: ಸ್ಫೋಟ ಸಂಭವಿಸಿ ಆರು ಮಂದಿ ಕಾರ್ಮಿಕರು ಸಜೀವ ದಹನ

ಪಾಕ್‌ನಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ 11 ಯೋಧರು ಸೇರಿ 30 ಮಂದಿ ಸಾವು

ಕಮಲದ ವಿನ್ಯಾಸದಲ್ಲಿ ತಯಾರಾದ ಮುಂಬೈನ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

ಮುಂದಿನ ಸುದ್ದಿ
Show comments