Publish Date: Thu, 19 Jul 2018 (09:09 IST)
Updated Date: Thu, 19 Jul 2018 (09:11 IST)
ನವದೆಹಲಿ: ಮೊನ್ನೆಯಷ್ಟೇ ಬಿಜೆಪಿ 2019 ರಲ್ಲಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗುತ್ತದೆ ಎಂದಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ.
ತರೂರ್ ಮೊದಲಿನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕೆಲವು ಕಿಡಿಗೇಡಿಗಳು ಅವರ ಕಚೇರಿ ಮೇಲೆ ದಾಳಿ ಮಾಡಿದ್ದರು. ಇದು ಬಿಜೆಪಿ ಯುವ ಮೋರ್ಚಾ ಕೃತ್ಯ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ತರೂರ್ ಬಿಜೆಪಿಯ ಹಿಂದೂ ರಾಷ್ಟ್ರ ಎನ್ನುವ ಕಲ್ಪನೆಯೇ ಅಪಾಯಕಾರಿ. ಇದು ಈ ದೇಶವನ್ನೇ ನಾಶಗೊಳಿಸುತ್ತದೆ. ಹಿಂದೂ ವಾದವನ್ನು ತಾಲಿಬಾನ್ ಆಗಿಸುವ ಯತ್ನ ನಡೆದಿದೆಯೇ? ಎಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕ ಅನಂತ ಕುಮಾರ್ ತರೂರ್ ನಡುವೆ ವಾಗ್ವಾದ ನಡೆಯಿತು. ಅಷ್ಟೇ ಅಲ್ಲ ಈ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದು ತರೂರ್ ಆಗ್ರಹಿಸಿದ್ದಕ್ಕೆ ತಿರುಗೇಟು ನೀಡಿದ ಅನಂತ ಕುಮಾರ್ ಇದು ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೃತ್ಯ. ಆಯಾ ರಾಜ್ಯಗಳ ಕಾನೂನು ಸುವ್ಯವಸ್ಥೆ ಆಯಾ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಇದರಲ್ಲಿ ಕೇಂದ್ರ ಮಧ್ಯಪ್ರವೇಶಿಸಲಾಗದು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.