ಕರ್ನಾಟಕದ ಒಂದು ವಿಡಿಯೋ ನೋಡ್ತಿದ್ದೆ. ಅದರಲ್ಲಿ ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿಯೊಬ್ಬರು ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳ ಮೋಕ್ಷ ಪ್ರಕರಣ ಪ್ರಸ್ತಾಪಿಸಿದರು.
`ನನ್ನ ಕಾರ್ಯಕರ್ತ ನನ್ನ ಮಿತ್ರ, ನನ್ನ ಸಹೋದರ ಇದ್ದಂತೆ. ನಮ್ಮಲ್ಲಿ ದೊಡ್ಡ ಕಾರ್ಯಕರ್ತ, ಚಿಕ್ಕ ಕಾರ್ಯಕರ್ತ ಅಂತಾ ಇಲ್ಲ ಎಲ್ಲರೂ ಸಮಾನರೇ ಎಂದು ಹೇಳಿದರು.
ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಬಡವನ ಅಗತ್ಯತೆಗಳನ್ನೂ ಬಿಜೆಪಿ ಸರ್ಕಾರ ಪೂರೈಸುತ್ತೆ. ಕಾಂಗ್ರೆಸ್, ಜೆಡಿಎಸ್ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಗೆ ಕಮ್ಮಿ ರೈತ ಫಲಾನುಭವಿಗಳ ಹೆಸರನ್ನ ಕಳುಹಿಸಿದ್ದರು. ಆದ್ರೆ ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ.
ಅವಕಾಶವಾದಿ, ಸ್ವಾರ್ಥ ಸಮ್ಮಿಶ್ರ ಸರ್ಕಾರವನ್ನ ನೀವು ನೋಡಿದ್ದೀರಿ, ಇಂತಹ ಸಮ್ಮಿಶ್ರ ಸರ್ಕಾರದಿಂದ ರಾಜ್ಯಕ್ಕೆ ಸಾಕಷ್ಟು ನಷ್ಟ ಆಗಿದೆ. ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಅಗತ್ಯವಿದೆ. ಬಹುಮತ ಪಡೆದ ಬಿಜೆಪಿ ಸರ್ಕಾರದ ಅಗತ್ಯ ಇದೆ. ಹಾಗಾಗಿ ಈ ಬಾರಿ ಬಿಜೆಪಿ ಸರ್ಕಾರವನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.