ಶಿವಸೇನೆ ಸಂಸದ ಸಂಜಯ್ ರಾವುತ್ ಪ್ರಧಾನಿ ಮೋದಿಯನ್ನು ತೆಗಳಿ ರಾಹುಲ್ ಗಾಂಧಿಯನ್ನು ಹೊಗಳಿರುವುದು ಬಿಜೆಪಿಗೆ ಆಕ್ರೋಶ ಉಂಟು ಮಾಡಿದೆ. ಇದೀಗ, ಶಿವಸೇನೆ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಸಚಿವ ವಿನೋದ್ ತಾವಡೆ ಉಪಸ್ಥಿತರಿದ್ದ ಸಭೆಯಲ್ಲಿಯೇ ಶಿವಸೇನೆ ಮುಖಂಡ ಸಂಜಯ್ ರಾವತ್, ಕಳೆದ 2014ರಲ್ಲಿದ್ದ ಮೋದಿ ಅಲೆ ಇದೀಗ ಅಂತ್ಯವಾಗಿದೆ. ಜನರು ಜಿಎಸ್‌ಟಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಭುದ್ಧರಾಗಿದ್ಪು ದೇಶದ ಜನತೆ ಅವರನ್ನು ನಾಯಕನೆಂದು ಒಪ್ಪಿಕೊಂಡಿದ್ದಾರೆ ಎಂದು ಮಾಡಿರುವ ಭಾಷಣ ಬಿಜೆಪಿ ಮುಖಂಡರಿಗೆ ಅಸಮಾಧಾನ ತಂದಿದೆ.
ಕಳೆದ 2014ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಎದುರಾಗಿದ್ದ ಬಿಕ್ಕಟ್ಟು ಅಂತ್ಯವಾದಂತೆ ಕಾಣುವುದಿಲ್ಲ. ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ನಂತರ ಶಿವಸೇನೆ ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಿತ್ತು.
ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ ಮಾತನಾಡಿ, ರಾವುತ್ ಹೇಳಿಕೆಯಿಂದ ಅಚ್ಚರಿಯಾಗಿಲ್ಲ. ಶಿವಸೇನೆಯ ಕೆಲ ನಾಯಕರು ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.