Publish Date: Sat, 19 Mar 2022 (13:18 IST)
Updated Date: Sat, 19 Mar 2022 (13:23 IST)
ಹೋಳಿಹಬ್ಬದ ಸಂಭ್ರಮದ ವೇಳೆ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 17 ವರ್ಷದ ಹುಡುಗನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬಾದಶಹಪುರದಲ್ಲಿ ನಡೆದಿದೆ.
ಮೃತನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಈತ 25 ಆಳದ ಬಾವಿಗೆ ಬಿದ್ದು, ನೀರಿನ ಸೆಲೆಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇನ್ಸ್ಪೆಕ್ಟರ್ ದಿನಕರ್, ಇಲ್ಲಿನ ಬಾದಶಹಪುರದಲ್ಲಿ ಹೋಳಿ ಸಂಭ್ರಮದ ವೇಳೆ ರಾಹುಲ್ ತನ್ನ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಯಸಿದ್ದಾನೆ.
ರಾಹುಲ್, ಲಲಿತ್ ಸೇರಿದಂತೆ ಮತ್ತೊಬ್ಬ ಸ್ನೇಹಿತ ಗ್ರಾಮದಲ್ಲಿರುವ ಬಾವಿಯ ಅಂಚಿನಲ್ಲಿ ಸರಪಳಿಯಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.
ಈ ವೇಳೆ ರಾಹುಲ್ ಮತ್ತು ಲಲಿತ್ನ ಕಾಲುಜಾರಿ ಬಾವಿಗೆ ಬಿದ್ದಿದ್ದಾನೆ. ನಂತರ 3ನೇ ವ್ಯಕ್ತಿ ನೀರಿಗೆ ಹಾರಿ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ನೀರಿನ ಸೆಲೆಗೆ ಸಿಕ್ಕಿದ್ದರಿಂದ ರಾಹುಲ್ನನ್ನು ಹೊರತೆಯಲು ಸಾಧ್ಯವಾಗದ ಕಾರಣ, ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ರಾಹುಲ್ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ.