ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಕರಾವಳಿ ಕುದಿಯುತ್ತಿದೆ. ಜಿಲ್ಲೆಯಾದ್ಯಂತ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಖಾಸಗಿ ಬಸ್ ಹಾಗೂ ವಾಹನಗಳು ರೋಡ್‌ಗಿಳಿದಿಲ್ಲ. ಇನ್ನೂ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಎಜೆ ಆಸ್ಪತ್ರೆ ಬಳಿ ಭಾರೀ ಜನಸ್ತೋಮ ಸೇರಿತ್ತು. ಅಲ್ಲಿಂದ್ದ ಸುಹಾಸ್ ಶೆಟ್ಟಿ ಮೃತದೇಹದ ಮೆರವಣಿಗೆಯಲ್ಲಿ ಭಾರೀ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಮಾರ್ಗಮಧ್ಯೆ ಸಿಕ್ಕಾ ರಿಕ್ಷಾವೊಂದನ್ನು ಜಖಂಗೊಳಿಸಿದ ಘಟನೆ ನಡೆದಿದೆ.
ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಹಾಸ್ ಶೆಟ್ಟಿ ಮೃತದೇಹ ಸಾಗುತ್ತಿದ್ದ ಮಾರ್ಗದಲ್ಲೇ ರಿಕ್ಷಾವೊಂದು ಬಂದಿದೆ. ಇದರಿಂದ ಕೋಪಗೊಂಡ ಹಿಂದೂ ಕಾರ್ಯಕರ್ತರು ರಿಕ್ಷಾವನ್ನು ಅಡ್ಡಾಕಟ್ಟಿ, ಮುಂದೇ ಹೋಗದಂತೆ ತಡೆದಿದ್ದಾರೆ. ಅದಲ್ಲದೆ ಗಾಜನ್ನು ಪುಡಿಮಾಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಪೊಲೀಸರು ಮೇ 6 ರವರೆಗೆ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮೂವತ್ತರ ಹರೆಯದ ಸುಹಾಸ್ ಶೆಟ್ಟಿಯನ್ನು ಜನನಿಬಿಡ ರಸ್ತೆಯಲ್ಲಿ ಕನಿಷ್ಠ ಐವರು ಆರೋಪಿಗಳು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.