Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಎರಡನೇ ದೊಡ್ಡ ಕೆರೆ ಶಾಂತಿಸಾಗರ ತುಂಬಿದ್ದು ಕೋಡಿ ಬಿದ್ದಿದೆ.
ಕೋಡಿ ಬಿದ್ದ ನೀರಿನಿಂದ ಜಲಪಾತ ಸೃಷ್ಟಿಯಾಗಿದ್ದು ನದಿಯಂತೆ ನೀರು ಹರಿಯುತ್ತಿದೆ. ಚನ್ನಗಿರಿ ತಾಲೂಕಿನ ಕೆರೆ ಬಿಳಚಿ ಗ್ರಾಮದ ಗದ್ದೆಯಲ್ಲಿರೋ ಜಾಗದಲ್ಲಿ ಜಲಪಾತ ಸೃಷ್ಟಿಯಾಗಿದ್ದು ಕೋಡಿ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಂಗಾಪುರ-ಕಬ್ಬಳ, ಚಿರಡೋಣಿ-ದೊಡ್ಡಘಟ್ಟ ಮಧ್ಯದ ಎರಡು ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಂಚರಿಸಲು ಅಡಚಣೆ ಉಂಟಾಗಿದೆ. ಮಳೆ ನಿಂತರು ಸೂಳೆಕೆರೆಯ ಕೋಡಿ ಬಿದ್ದ ನೀರು ಇನ್ನೂ ಹರಿಯುತ್ತಿದೆ.