ದೇಶದ್ರೋಹ ಕಾನೂನು ಪರಾಮರ್ಶೆ ನಡೆಸುವುದಾಗಿ ಕೇಂದ್ರ ವರದಿ ನೀಡಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ದೇಶದ್ರೋಹ ಕಾನೂನು ಬಳಕೆಗ ತಡೆ ನೀಡಿದ್ದು, ಹೊಸದಾಗಿ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ದೇಶದ್ರೋಹ ಸೆಕ್ಷನ್ ೧೨೪ ಕಾಯ್ದೆ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಕೇಂದ್ರ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಯ್ದೆ ಪರಾಮರ್ಶೆ ನಡೆಸಿ ಅಂತಿಮ ತೀರ್ಪು ನೀಡುವವರೆಗೂ ಹೊಸದಾಗಿ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ, ದೇಶದ್ರೋಹ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಹಾಗೂ ವಿಚಾರಣಾಧೀನ ಕೈದಿಗಳಾಗಿರುವವರು ಜಾಮೀನು ಹಾಗೂ ಬಿಡುಗಡೆ ಕುರಿತು ನ್ಯಾಯಾಲಯ ಮೊರೆ ಹೋಗಬಹುದು ಎಂದು ತಿಳಿಸಿದೆ.