Webdunia - Bharat's app for daily news and videos

Install App

ಆಸ್ಸಾಂನಲ್ಲಿ ಆರೆಸ್ಸೆಸ್‌ನಿಂದ ಬಾಲಕಿಯರ ಕಳ್ಳಸಾಗಾಣಿಕೆ: ಕಾಂಗ್ರೆಸ್ ಆರೋಪ

Webdunia
ಶನಿವಾರ, 30 ಜುಲೈ 2016 (19:33 IST)
ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಸಂಸ್ಥೆಗಳು ಆಸ್ಸಾಂ ರಾಜ್ಯದಿಂದ ಕಾನೂನುಬಾಹಿರವಾಗಿ ಬುಡಕಟ್ಟು ಸಮುದಾಯದ ಬಾಲಕಿಯರ ಮಾನವ ಕಳ್ಳಸಾಗಾಣಿಕೆ ಮಾಡುತ್ತಿವೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಭಾಗವಾಗಿದೆಯೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
 
ಸಂಘ ಪರಿವಾರದ ಸಹೋದರಿ ಸಂಸ್ಥೆಗಳಾದ ರಾಷ್ಟ್ರ ಸೇವಿಕಾ ಸಮಿತಿ, ವಿದ್ಯಾ ಭಾರತಿ ಮತ್ತು ಸೇವಾ ಭಾರತಿ ಸಂಸ್ಥೆಗಳು ಉತ್ತಮ ಶಿಕ್ಷಣ ಕೊಡಿಸುವ ನೆಪವೊಡ್ಡಿ ಆಸ್ಸಾಂ ರಾಜ್ಯದಿಂದ ಬುಡಕಟ್ಟು ಸಮುದಾಯದ ಬಾಲಕಿಯರನ್ನು ಕಳ್ಳಸಾಗಾಣೆ ಮಾಡುತ್ತಿರುವುದು ಹೇಯ, ಕೆಟ್ಟ, ನೋವು ತರುವಂತಹ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
 
ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಶೋಭಾ ಓಝಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಚತುರ್ವೇದಿ, ಕುಲಂಕೂಷ ತನಿಖೆ ನಡೆಸಿ, ಸಾಕ್ಷ್ಯ ಕಿರು ಧಾರವಾಹಿ ಬಹಿರಂಗವಾಗಿದ್ದು, ಯಾವ ರೀತಿ ಸಂಘ ಪರಿವಾರ ದೇಶಿಯ ಮತ್ತು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿ, ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು 31 ಬುಡಕಟ್ಟು ಸಮುದಾಯದ ಬಾಲಕಿಯರಿಗೆ ಆಸ್ಸಾಂನಿಂದ ಪಂಜಾಬ್‌ಗೆ ಮತ್ತು ಗುಜರಾತ್‌ನಿಂದ ಬೇರೆ ಕಡೆ ಸ್ಥಳಾಂತರಿಸಲಾಗುತ್ತದೆ ಎನ್ನುವ ಸಂಪೂರ್ಣ ವಿವರಗಳು ಬಹಿರಂಗವಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಡಾವೋ ಭರವಸೆ ಈಡೇರಿದೆಯೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ಮಕ್ಕಳಿಗೆ ರಕ್ಷಣೆ ಕೊಡುವುದು ಮತ್ತು ಶಿಕ್ಷಿತರನ್ನಾಗಿ ಮಾಡುವ ಉದ್ದೇಶ ಏನಾಯ್ತು? ಆಸ್ಸಾಂನಿಂದ ಪಂಜಾಬ್‌ಗೆ ಕರೆದುಕೊಂಡು ಹೋಗಿರುವ 31 ಮಕ್ಕಳು ಸುರಕ್ಷಿತವಾಗಿ ಮನೆಗಳಿಗೆ ವಾಪಸಾಗಿದ್ದಾರೆಯೇ ಎಂದು ಗುಡುಗಿದ್ದಾರೆ.   
 
ಕೇಂದ್ರ ಸರಕಾರ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ ಗುಜರಾತ್ ಮತ್ತು ಪಂಜಾಬ್ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎಂದು ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments