ಪೂರ್ವ ಅಫ್ಘಾನಿಸ್ತಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 36 ಐಸಿಎಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಖಾಮಾ ಪ್ರದೇಶದ ಅಚಿನ್ ಜಿಲ್ಲೆಯಲ್ಲಿ ಅಫ್ಘನ್ ಸೇನಾಪಡೆಗಳು ಕಹರ್ ಸಿಲಾಬ್ ಆಪರೇಶನ್ ನಡೆಸಿದ ಸಂದರ್ಭದಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಐಸಿಸ್ ಉಗ್ರರು ಹತರಾಗಿದ್ದಾರೆ ಎಂದು ಸೇನಾಪಡೆಗಳು ತಿಳಿಸಿವೆ.
ಅಚಿನ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರು ಮತ್ತು ಐಸಿಸ್ ಉಗ್ರರು ಜಂಟಿಯಾಗಿ ಸಂಚು ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಸೇನಾಪಡೆಗಳು, ಉಗ್ರರ ಮೇಲೆ ದಾಳಿ ನಡೆಸಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಐಸಿಸ್ ಉಗ್ರಗಾಮಿ ಸಂಘಟನೆ, ಅಫ್ಘಾನಿಸ್ತಾನ್ ದೇಶದಲ್ಲೂ ತಮ್ಮ ಚಟುವಟಿಕೆಯನ್ನು ವಿಸ್ತರಿಸಿಕೊಂಡು ಸರಕಾರಕ್ಕೆ ಮತ್ತು ತಾಲಿಬಾನ್ ಸೇರಿದಂತೆ ಇತರ ಉಗ್ರಗಾಮಿ ಸಂಘಟನೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.