ಆರೆಸ್ಸೆಸ್ ಸಂಘಟನೆ ದೇಶದಲ್ಲಿ ಕೋಮುಗಲಭೆ ಹರಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಸಂಘಟನೆ ಹಿಂಸಾಚಾರದಲ್ಲಿ ಜಾಗತಿಕ ಉಗ್ರಗಾಮಿ ಐಎಸ್‌ಐಎಸ್ ಸಂಘಟನೆಯನ್ನು ಮೀರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಆರೆಸ್ಸೆಸ್ ಸಂಘಟನೆಯ ಕೋಮುಗಲಭೆ ಮುಖವಾಡ ಬಹಿರಂಗವಾಗಿದೆ. ಕೇರಳದಲ್ಲಿ ಕೋಮುಗಲಭೆ ಸೃಷ್ಟಿಸಿ ಸಮುದಾಯಗಳಲ್ಲಿ ಗೊಂದಲ ಮೂಡಿಸಲು ಸಂಚು ರೂಪಿಸಿದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಕೋಮುಗಲಭೆ ಹರಡಲು ಆರೆಸ್ಸೆಸ್ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.