Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

`ಗೌರಿ ಲಂಕೇಶ್ ಹತ್ಯೆ ತನಿಖೆ ಆರೆಸ್ಸೆಸ್ ಕಚೇರಿಯಿಂದಲೇ ಆರಂಭವಾಗಲಿ’

`ಗೌರಿ ಲಂಕೇಶ್ ಹತ್ಯೆ ತನಿಖೆ ಆರೆಸ್ಸೆಸ್ ಕಚೇರಿಯಿಂದಲೇ ಆರಂಭವಾಗಲಿ’
ಬೆಂಗಳೂರು , ಸೋಮವಾರ, 11 ಸೆಪ್ಟಂಬರ್ 2017 (12:56 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಆರೆಸ್ಸೆಸ್ ಕಚೇರಿಯಿಂದಲೇ ಆರಂಭವಾಗಲಿ ಎಂದು ಮಾಜಿ ನಕ್ಸಲ್ ಮುಖಂಡರಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಒತ್ತಾಯಿಸುತ್ತಿದ್ದಾರೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಸಂಘ ಪರಿವಾರದವರ ಕೈವಾಡವಿರುವ ಬಗ್ಗೆ ತನಿಖೆ ನಡೆಯಲಿ, ಗೌರಿ ಹತ್ಯೆ ಬಗ್ಗೆ ಸಂಭ್ರಮಾಚರಣೆ ನಡೆಸುತ್ತಿರುವವರ ತನಿಖೆ ನಡೆಯಲಿ, ಸಂಘಪರಿವಾರದವರು ಈಗಲೂ ಹತ್ಯೆಯ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ವೈಚಾರಿಕ ದ್ವೇಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ಖಚಿತ. ಬೆಂಗಳೂರಿನ ಾರೆಸ್ಸೆಸ್ ಕಚೇರಿಯಿಂದಲೇ ತನಿಖೆ ಆರಂಭವಾಗಲಿ ಎಂದು ಪ್ರೆಸ್ ಕ್ಲಬ್`ನಲ್ಲಿ ಸುದ್ದಿಗೋಷ್ಠಿ ನಡೆಸಿದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಹೇಳಿದ್ದಾರೆ.

ಗೌರಿ ಹತ್ಯೆ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ.  ಹತ್ಯೆ ಹಿಂದಿನ ಸತ್ಯವನ್ನೇ ಹತ್ಯೆ ಮಾಡುವ ಯತ್ನ ನಡೆದಿದೆ.ನಕ್ಸಲರಿಂದಲೇ ಗೌರಿ ಲಂಕೇಶ್ ಹತ್ಯೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುವ ಯತ್ನ ನಡೆಯುತ್ತಿದೆ. ಆದಿವಾಸಿ ಜನಾಂಗದ ನಕ್ಸಲ್ ವಿಕ್ರಂ ಗೌಡ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಆತ ಮುಗ್ದ ಗೌರಿ ಲಂಕೆಶ್ ಹತ್ಯೆ ಮಾಡಿರಲು ಸಾಧ್ಯವೇ ಇಲ್ಲ ಎಂದು ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ಪತಿ ನಟರಾಜನ್ ಆಸ್ಪತ್ರೆಗೆ ದಾಖಲು