Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿವೃತ್ತ ನ್ಯಾ. ಕರ್ಣನ್ ಜಾಮೀನು ಅರ್ಜಿ ವಜಾ

ನಿವೃತ್ತ ನ್ಯಾ. ಕರ್ಣನ್ ಜಾಮೀನು ಅರ್ಜಿ ವಜಾ
ನವದೆಹಲಿ , ಬುಧವಾರ, 21 ಜೂನ್ 2017 (11:26 IST)
ನ್ಯಾಯಾಂಗ ನಿಂದನೆ ಆರೋಪದಡಿ 6 ತಿಂಗಳು ಜೈಲುಶಿಕ್ಷೆಗೊಳಗಾಗಿರುವ ಕೋಲ್ಕತ್ತಾ ಹೈಕೋರ್ಟ್`ನ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಜಾಮೀನು ಅರ್ಜಿ ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.

ನ್ಯಾಯಾಂಗ ನಿಂದನೆ ಆರೋಪದಡಿ ಮೇ 9ರಂದು ನ್ಯಾ. ಕರ್ಣನ್`ಗೆ ಸುಪ್ರೀಂಕೋರ್ಟ್ 6 ತಿಂಗಳ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಕರ್ಣನ್ ಅವರನ್ನ ನಿನ್ನೆ ಕೊಯಮತ್ತೂರು ಬಳಿ ರೆಸಾರ್ಟ್`ನಲ್ಲಿ ಬಂಧಿಸಲಾಗಿದೆ. ಬಂಧನದ ವೇಳೆ ಪೊಲೀಸರಿಗೆ ಪ್ರತಿರೋಧ ಒಡ್ಡಿದ ಕರ್ಣನ್ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸೇವೆಯಲ್ಲಿರುವಾಗಲೇ ಶಿಕ್ಷೆಗೊಳಗಾದ ನ್ಯಾಯಮೂರ್ತಿ ಎಂಬ ಕುಖ್ಯಾತಿಗೆ ಕರ್ಣನ್ ಗುರಿಯಾಗಿದ್ದು, ಜೂನ್ 12ರಂದು ನಿವೃತ್ತರಾಗಿದ್ದರು. ವಿವಾದಗಳ ಮೂಲಕವೇ ಸುದ್ದಿಯಾಗಿದ್ದ ಕರ್ಣನ್ ಅವರನ್ನ ಮದ್ರಾಸ್ ಹೈಕೋರ್ಟ್`ನಿಂದ ಕೋಲ್ಕತ್ತಾಗೆ ವರ್ಗಾವಣೆ ಮಾಡಲಾಗಿತ್ತು. 


Share this Story:

Follow Webdunia kannada

ಮುಂದಿನ ಸುದ್ದಿ

ಸುರಿವ ಮಳೆಯಲ್ಲೇ ಯೋಗ ಮಾಡಿದ ಪ್ರಧಾನಿ ಮೋದಿ