Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುರಿವ ಮಳೆಯಲ್ಲೇ ಯೋಗ ಮಾಡಿದ ಪ್ರಧಾನಿ ಮೋದಿ

ಸುರಿವ ಮಳೆಯಲ್ಲೇ ಯೋಗ ಮಾಡಿದ ಪ್ರಧಾನಿ ಮೋದಿ
Luknow , ಬುಧವಾರ, 21 ಜೂನ್ 2017 (09:02 IST)
ಲಕ್ನೋ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಕ್ನೋದ ಅಂಬೇಡ್ಕರ್ ಸಭಾ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸುರಿವ ಮಳೆಯನ್ನೂ ಲೆಕ್ಕಿಸಿದಂತೆ ಪ್ರಧಾನಿ ಮೋದಿ ಪಾಲ್ಗೊಂಡರು.

 
ಸುಮಾರು 45, 000 ಮಂದಿ ಪ್ರಧಾನಿ ಮೋದಿ ಜತೆಗೆ ಯೋಗ ಮಾಡಿದರು. ಈ ವೇಳೆ ಮಳೆ ಸುರಿಯುತ್ತಿದ್ದರಿಂದ ಮೈದಾನವಿಡೀ ಒದ್ದೆಯಾಗಿತ್ತು. ಅಲ್ಲದೆ, ಸುರಿವ ಮಳೆಯಲ್ಲೇ ಸಾವಿರಾರು ಮಂದಿ ಯೋಗ ಮಾಡಿದರು.

ಪ್ರಧಾನಿ ಜತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೂ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಭಾಷಣ ಮಾಡಿದ ಪ್ರಧಾನಿ ಮೋದಿ ಯೋಗ ದಿನಾಚರಣೆಯ ನಿಮಿತ್ತ ದೇಶದ ಜನತೆಗೆ ಶುಭಕೋರಿದರು. ಇಂದು ವಿಶ್ವದಾದ್ಯಂತ ಸುಮಾರು 180 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಂಗ ನಿಂದನೆ ಕೇಸ್: ನಿವೃತ್ತ ನ್ಯಾಯಮೂರ್ತಿ ಕರ್ಣನ್ ಬಂಧನ