Publish Date: Mon, 11 Dec 2017 (12:05 IST)
Updated Date: Mon, 11 Dec 2017 (12:07 IST)
ಕ್ಯಾನ್ಸರ್ ಪೀಡಿತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಿರುವ ಘಟನೆ ಲಕ್ನೋದಲ್ಲಿನ ಸರೋಜಿನಿ ನಗರದಲ್ಲಿ ಜರುಗಿದೆ.
15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಇಬ್ಬರು ಯುವಕರು ಅತ್ಯಾಚಾರ ನಡೆಸಿದ್ದಾರೆ. ನಂತರ ಸಹಾಯಕ್ಕಾಗಿ ಅಂಗಲಾಚಿದ ಬಾಲಕಿಯ ಮೇಲೆ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ.
ಮಾರ್ಕೆಟ್‍ಗೆ ಹೋಗಿ ವಾಪಸ್ ಬರುತ್ತಿದ್ದಾಗ ಬಾಲಕಿಯನ್ನು ಮನೆಯತ್ತರ ಬಿಡುವುದಾಗಿ ಬೈಕ್ ಹತ್ತಿಕೊಂಡ ಯುವಕ ಶುಭಮ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸ್ನೇಹಿತ ಸುಮಿತ್ ಜೊತೆಗೂಡಿ ಅತ್ಯಾಚಾರ ಎಸಗಿದ್ದಾರೆ.
ನಂತರ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಗೆ ಘಟನೆ ವಿವರಿಸಿ ಸಹಾಯ ಕೇಳಿದಾಗ, ಆ ವ್ಯಕ್ತಿ ಕೂಡ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ಪೋಷಕರಿಗೆ ಒಪ್ಪಿಸಿ, ಸಹಾಯಕ್ಕಾಗಿ ಅಂಗಲಾಚಿದಾಗ ಅತ್ಯಾಚಾರ ನಡೆಸಿದ ವ್ಯಕ್ತಿ ವೀರೇಂದ್ರ ಯಾದವನನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಗುತ್ತಿಗೆದಾರನಾಗಿದ್ದಾನೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.