ನವದೆಹಲಿ : 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ಆತನ ಶರ್ಟ್ ಸುಳಿವಿನಿಂದ ಬಂಧಿಸಿದ ಪ್ರಕರಣ ದೆಹಲಿಯಲ್ಲಿ ನಡೆದಿದೆ. ಆರೋಪಿಯನ್ನು ಮೋನು ಎಂದು ಗುರುತಿಸಲಾಗಿದೆ.
ಕೃತ್ಯ ಎಸಗುವಾಗ ಧರಿಸಿದ್ದ ಹಳದಿ ಬಣ್ಣದ ಶರ್ಟ್ ನಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಾಲಕಿಯ ಪೋಷಕರು ಶಾಲೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬ ಶಾಲೆಯ ಒಂದು ಕೊಠಡಿಯಲ್ಲಿ ಉಳಿದುಕೊಂಡಿತ್ತು. ಕೆಲವು ದಿನಗಳಿಂದ ಶಾಲೆಗೆ ರಜೆ ಘೋಷಿಸಲಾಗಿತ್ತು.
ಬಾಲಕಿಯ ಪೋಷಕರು ವೇತನ ಪಡೆಯಲು ಮಂಗಳವಾರ ತೆರಳಿದ್ದರು. ಈ ವೇಳೆ ಸಂತ್ರಸ್ತೆ ಮತ್ತು ಆಕೆಯ 18 ವರ್ಷದ ಸಹೋದರಿ ಇಬ್ಬರೇ ಮನೆಯಲ್ಲಿದ್ದರು. ಇದನ್ನು ಗಮನಿಸಿದ ಆರೋಪಿ ಮನೆಗೆ ನುಗ್ಗಿದ್ದ.
ಬೆಳಗ್ಗೆ 11.30 ರ ಸುಮಾರಿಗೆ ಆರೋಪಿ ನುಗ್ಗಿ ಬಾಲಕಿಯ ಮನೆಯನ್ನು ದರೋಡೆ ಮಾಡಿದ್ದಾನೆ. ಬಳಿಕ ಅಡುಗೆ ಮನೆಯಿಂದ ಚಾಕುವನ್ನು ಎತ್ತಿಕೊಂಡು 16 ವರ್ಷದ ಅಪ್ರಾಪ್ತ ಬಾಲಕಿಗೆ ಬೆದರಿಸಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.