ಹೈದರಾಬಾದ್ : ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ಖಂಡಿಸಿ ಶಿಕ್ಷೆ ವಿಧಿಸಿಬೇಕಾದ ನ್ಯಾಯಾಧೀಶರ ವಿರುದ್ಧವೇ ಅತ್ಯಾಚಾರ ಆರೋಪ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಅವರನ್ನು ಬಂಧಿಸಲಾಗಿದೆ.
ಸೂರ್ಯಪೇಟ್ ಜಿಲ್ಲೆಯ ತುಂಗಾತುರ್ಥಿ ಜೂನಿಯರ್ ಸಿವಿಲ್ ಜಡ್ಜ್ ಟಿ ಸತ್ಯನಾರಾಯಣ ಅವರು ಮಹಿಳೆಯೊಬ್ಬರನ್ನುಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮತ್ತೊಬ್ಬಳನ್ನ ಮದುವೆಯಾಗಲು ತಯಾರಿ ನಡೆಸಿದ್ದರಂತೆ. ಇದನ್ನ ಪ್ರಶ್ನಿಸಿ ನ್ಯಾಯಾಧೀಶರನ್ನ ಮಹಿಳೆ ಭೇಟಿ ಮಾಡಲು ತೆರಳಿದಾಗ ದೌರ್ಜನ್ಯ ಎಸಗಿದ್ದರಂತೆ. ಹೀಗಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಜಡ್ಜ್ ವಿರುದ್ಧ ವಂಚನೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಜಡ್ಜ್ ವಿರುದ್ಧ ಸೆಕ್ಷನ್ 376( ರೇಪ್) 420 ( ಮೋಸ) ಹಾಗೂ ಎಸ್ಸಿ/ ಎಸ್ಟಿ ಪ್ರಿವೆನ್ಷನ್ ಆ್ಯಕ್ಟ್ ಪ್ರಕಾರ ಕೇಸ್ ದಾಖಲಾಗಿದೆ.
ಈ ಸಂಬಂಧ ಮಹಿಳಾ ವಕೀಲರು ದೂರು ಸಲ್ಲಿಸಿ 11 ದಿನಗಳ ಬಳಿಕ ಚಿಕ್ಕದಪಲ್ಲಿ ಪೊಲೀಸರು ಹೈದರಾಬಾದ್ ಹೈಕೋರ್ಟ್ ಒಪ್ಪಿಗೆ ಪಡೆದು ಬುಧವಾರ (ಇಂದು )ನ್ಯಾಯಾಧೀಶರನ್ನ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸತ್ಯನಾರಾಯಣ ಅವರ ಮೇಲೆ ಆರೋಪ ಬಂದಿರುವ ಹಿನ್ನಲೆಯಲ್ಲಿ ಹೈಕೋರ್ಟ್ ಟಿ. ಸತ್ಯನಾರಾಯಣ ಅವರನ್ನ ಅಮಾನತು ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ