Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇರಾ ಮುಖ್ಯಸ್ಥನ ವಿರುದ್ಧ ರೇಪ್ ಕೇಸ್ ತೀರ್ಪು: ಹರ್ಯಾಣ, ಪಂಜಾಬ್`ನಲ್ಲಿ ಹೈ ಅಲರ್ಟ್

ದೇರಾ ಮುಖ್ಯಸ್ಥನ ವಿರುದ್ಧ ರೇಪ್ ಕೇಸ್ ತೀರ್ಪು: ಹರ್ಯಾಣ, ಪಂಜಾಬ್`ನಲ್ಲಿ ಹೈ ಅಲರ್ಟ್
ಚಂಢೀಗಡ , ಶುಕ್ರವಾರ, 25 ಆಗಸ್ಟ್ 2017 (08:56 IST)
ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಇವತ್ತು ಅಕ್ಷರಶಃ ಉದ್ವಿಗ್ನ ವಾತಾವರಣ. ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಹೊರಬೀಳಲಿದ್ದು, 1.5 ಲಕ್ಷಕ್ಕೂ ಅಧಿಕ ಭಕ್ತರು ಪಂಚಕುಲದಲ್ಲಿ ಜಮಾಯಿಸಿದ್ದಾರೆ.
 

ನಿನ್ನೆಯೇ ಭಕ್ತರು ಪಂಚುಕುಲಕ್ಕೆ ಆಗಮಿಸಿದ್ದು, ತೀರ್ಪು ಬರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ಧಾರೆ. ವಿಶೇಷ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಪಂಚಕುಲದ ಕೋರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳ ರಾಜಧಾನಿ ಚಂಢೀಗಡ ಸೇರಿ ಹಲವೆಡೆ ಭದ್ರತೆ ಹೆಚ್ಚಿಸಲಾಗಿದೆ. 25 ಸೇನಾ ತುಕಡಿ, 18000 ಪ್ಯಾರಾ ಮಿಲಿಟರಿ ಪಡೆ ಪಂಚಕುಲ ತಲುಪಿದೆ.ಮೊಬೈಲ್ ಸೆಟ್ವರ್ಕ್ ನಿನ್ನೆಯಿಂದಲೇ ಬಂದ್ ಮಾಡಲಾಗಿದ್ದು, ಇಂಟರ್ನೆಟ್ ಸೇವೆಗೆ ಇವತ್ತು ಫುಲ್ ಸ್ಟಾಪ್ ಬೀಳಲಿದೆ.ಮುಂಜಾಗ್ರತಾ ಕ್ರಮವಾಗಿ 700 ಬಸ್ ಮತ್ತು 25 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಟೇಡಿಯಂಗಳನ್ನೇ ತಾತ್ಕಾಲಿಕ ಜೈಲುಗಳಗಿ ಪರಿವರ್ತಿಸಲಾಗಿದೆ.

ಏನಿದು ಪ್ರಕರಣ..?: 2002ರಲ್ಲಿ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಇಬ್ಬರು ಸಾಧ್ವಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಸುದ್ದಿ ಹರಡಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶದ ಬಳಿಕ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಡ್ ನಿರ್ಮಿಸಿದ್ರೆ ಹುಷಾರ್ ಎಂದ ಚೀನಾ