Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಡ್ ನಿರ್ಮಿಸಿದ್ರೆ ಹುಷಾರ್ ಎಂದ ಚೀನಾ

ರೋಡ್ ನಿರ್ಮಿಸಿದ್ರೆ ಹುಷಾರ್ ಎಂದ ಚೀನಾ
ಬೀಜಿಂಗ್ , ಶುಕ್ರವಾರ, 25 ಆಗಸ್ಟ್ 2017 (07:31 IST)
ಬೀಜಿಂಗ್: ಲಡಾಕ್ ಗಡಿ ಭಾಗದಲ್ಲಿ ರಸ್ತೆ ನಿರ್ಮಿಸಲು ಹೊರಟ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹಾಳು ಮಾಡಬಹುದು ಎಂದು  ಅದು ಎಚ್ಚರಿಸಿದೆ.

 
‘ಲಡಾಕ್ ಗಡಿಯಲ್ಲಿ ರಸ್ತೆ ನಿರ್ಮಿಸುವ ದುಸ್ಸಾಹಸ ಮಾಡದಿರಿ. ಇದು ಡೋಕ್ಲಾಂ ಗಡಿ ವಿವಾದಿಂದ ಉಂಟಾದ ವೈಮನಸ್ಯವನ್ನು ಮತ್ತಷ್ಟು ಹದಗೆಡಿಸಬಹುದು’ ಎಂದು ಚೀನಾ ವಿದೇಶಾಂಗ ವಕ್ತಾರ ಹ್ಯೂ ಎಚ್ಚರಿಕೆ ನೀಡಿದ್ದಾರೆ.

ಭಾರತ ಬಹಿರಂಗವಾಗಿ ಶಾಂತಿ ಬಯಸುತ್ತೇವೆ ಎಂದು ಹೇಳಿಕೊಂಡು, ಇನ್ನೊಂದೆಡೆ ಶಾಂತಿ ಕದಡುವ ಯತ್ನ ಮಾಡುತ್ತಿದೆ. ಹೇಳುತ್ತಿರುವುದು ಒಂದು ಮಾಡುತ್ತಿರುವುದು ಇನ್ನೊಂದು. ಶಾಂತಿ ಬೇಕಾದರೆ ಇಂತಹ ಪ್ರಯತ್ನವನ್ನು ಕೈ ಬಿಡುವುದು ಒಳಿತು ಎಂದು ಅವರು ಎಚ್ಚರಿಸಿದ್ದಾರೆ.

ಅತ್ತ ಡೋಕ್ಲಾಂ ಗಡಿಯಲ್ಲೂ ಚೀನಾ ರಸ್ತೆ ನಿರ್ಮಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತಕಾರಾರು ಆರಂಭವಾಗಿತ್ತು.

ಇದನ್ನೂ ಓದಿ.. ಎಂಸ್ ಧೋನಿ ಈಗ ವಿಕೆಟ್ ಹಿಂದೆ 99 ನಾಟೌಟ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮುವಿನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಪ್ರತ್ಯಕ್ಷ: ಹೈ ಅಲರ್ಟ್ ಘೋಷಣೆ