ಏಕ ಶ್ರೇಣಿ, ಏಕ ಪಿಂಚಣಿ ಜಾರಿ ವಿಳಂಬವನ್ನು ವಿರೋಧಿಸಿ ಆತ್ಮಹತ್ಯೆಗೆ ಶರಣಾಗಿರುವ ಮಾಜಿ ಯೋಧ ರಾಮ್ ಕಿಶನ್ ಗ್ರೇವಾಲ್ ಹುತಾತ್ಮರಲ್ಲ ಎನ್ನುವುದರ ಮೂಲಕ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗಡಿಯಲ್ಲಿ ಯುದ್ಧ ಮಾಡುತ್ತ ಸಾವನ್ನು ಕಂಡವರು ಮಾತ್ರ ಹುತಾತ್ಮರೆನಿಸುತ್ತಾರೆ ಹೊರತು ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧರಲ್ಲ ಎಂದು ಕಟ್ಟರ್ ಹೇಳಿದ್ದಾರೆ.
ಮುಂದುವರೆದ ಸಿಎಂ ಗ್ರೇವಾಲ್ ಆತ್ಮಹತ್ಯೆ ಮಾಡಿಕೊಂಡಿದ್ದು ವೈಯಕ್ತಿಕ ಕಾರಣಕ್ಕೆ ಎಂದರು.
ಸಿಎಂ ಅವರ ಮಾತುಗಳಿಗೆ ತೀವ್ರ ಖಂಡನೆ ವ್ಯಕ್ತ ಪಡಿಸಿರುವ ಕಾಂಗ್ರೆಸ್ ನಾಯಕರು ಇದು ಮೃತ ಯೋಧನಿಗೆ ಮಾಡಿರುವ ಅವಮಾನ. ಕಟ್ಟರ್ ತಮ್ಮ ಹೇಳಿಕೆಗಳನ್ನು ವಾಪಸ್ ಪಡೆಯಲಿ ಎಂದಿದ್ದಾರೆ.
ಆಪ್ ಸಹ ಕಟ್ಟರ್ ಅವರ ವಿರುದ್ಧ ಕಿಡಿಕಾರಿದ್ದು , ಬಿಜೆಪಿ ಧುರೀಣ ಮಾಜಿ ಯೋಧನಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ದೆಹಲಿ ಸರ್ಕಾರ ಹುತಾತ್ಮ ಸ್ಥಾನವನ್ನು ನೀಡುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ