ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರನ್ನು ನೆನಪಿಸಿಕೊಂಡರು.
ಹಂಪಿ ಉತ್ಸವದ ರೂವಾರಿಯಾಗಿರುವ ಪ್ರಕಾಶ್ ಮತ್ತು ನಾನು 1983ರಲ್ಲಿ ಒಟ್ಟಿಗೆ ರಾಜಕೀಯ ಪ್ರವೇಶಿಸಿದೆವು. ಹೂವಿನ ಹಡಗಲಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅವರು ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ಕಲೆ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ನಾನು ಹಣಕಾಸು ಸಚಿವನಾಗಿದ್ದ ಸಮಯದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವವನ್ನು ಪ್ರಾರಂಭಿಸಬೇಕು ಎಂಬ ಪ್ರಸ್ತಾಪವನ್ನಿಟ್ಟಿದ್ದರು ಎಂದು ಸಿಎಂ ಹಳೆಯ ದಿನಗಳನ್ನು ಸ್ಮರಿಸಿಕೊಂಡರು.
ಅವರ ಪ್ರಸ್ತಾಪಕ್ಕೆ ನಾನು ಹಣಕಾಸು ಒದಗಿಸುವ ಭರವಸೆಯನ್ನು ನಾನಿತ್ತೆ. ಅವರಿಂದಲೇ ಹಂಪಿ ಉತ್ಸವ ಪ್ರಾರಂಭವಾಯ್ತು. ಕಳೆದ ವರ್ಷ ಭೀಕರ ಬರಗಾಲವಿದ್ದುದರಿಂದ ಉತ್ಸವವನ್ನು ಆಚರಿಸಲಿಲ್ಲ. ಈ ವರ್ಷವೂ ಬರಗಾಲ ಒಕ್ಕರಿಸಿಕೊಂಡಿದೆ. ಆದರೆ ರಾಜ್ಯದ ಕಲೆ, ಸಾಹಿತ್ಯ , ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯವಾಗಿರುವುದರಿಂದ ಉತ್ಸವವನ್ನು ಆಚರಿಸಲಾಗುತ್ತದೆ ಎಂದಿದ್ದಾರೆ ಸಿಎಂ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ