ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನ ಮೂರೂ ಸೀಟ್ ಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬೇಕೆಂದು ಪ್ರಯತ್ನಿಸಿದ್ದ ಬಿಜೆಪಿಗೆ ಸೋಲಾಗಿದೆ. ಇದು ಗುಜರಾತ್ ನ ಮುಂದಿನ ರಾಜಕೀಯ ಭವಿಷ್ಯದ ಸೂಚನೆಯೇ?
ಕೆಲವೇ ತಿಂಗಳುಗಳಲ್ಲಿ ಇಲ್ಲಿ ವಿಧಾನಸಭೆ ಚುನಾವಣೆಯಿದೆ. ಹಾಗಾಗಿ ಅಹಮ್ಮದ್ ಪಟೇಲ್ ರನ್ನು ಸೋಲಿಸಿ ತನ್ನ ಪ್ರಾಬಲ್ಯ ಇನ್ನೂ ರಾಜ್ಯದಲ್ಲಿ ಯಥಾರೀತಿಯಲ್ಲೇ ಇದೆ ಎಂದು ಸಾರಲು ಬಿಜೆಪಿ ಹೊರಟಿತ್ತು. ಅದೀಗ ಸುಳ್ಳಾಗಿದೆ.
ಹೀಗಾಗಿ ಮುಂಬರುವ ಚುನಾವಣೆಗೆ ಬಿಜೆಪಿ ಮತ್ತಷ್ಟು ಪ್ರಯತ್ನ ಪಡುವುದಂತೂ ನಿಜ. ಎಷ್ಟಾದರೂ ಇದು ರಾಜ್ಯಸಭೆ ಚುನಾವಣೆಯಲ್ಲವೇ? ಇದರಿಂದ ಜನರ ಮತ ಯಾರಿಗೆ ಎಂದು ತಿಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ಸಮಾಧಾನಪಟ್ಟುಕೊಳ್ಳಬಹುದು.
ಹಾಗಿದ್ದರೂ, ಸತತ ಸೋಲಿನಿಂದ ಕಂಗೆಟ್ಟಿಂದ ಕಾಂಗ್ರೆಸ್ ಗೆ ಈ ಒಂದು ಗೆಲುವು ನೂರಾನೆ ಬಲ ತಂದಿರುತ್ತದೆ. ಇಷ್ಟರವರೆಗೆ ಗುಜರಾತ್ ನಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ನಿರಾಯಾಸವಾಗಿ ಗೆಲ್ಲುತ್ತಿದ್ದ ಬಿಜೆಪಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಮೋದಿ ನಂತರ ಮುಖ್ಯಮಂತ್ರಿಯಾಗಿ ಬಂದ ಆನಂದಿ ಬೆನ್ ಮತ್ತು ವಿಜಯ್ ರೂಪಾನಿ ಅಷ್ಟೊಂದು ಪ್ರಭಾವ ಬೀರಿಲ್ಲ. ಇದೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ಗೆ ಈ ರಾಜ್ಯಸಭೆ ಚುನಾವಣಾ ಫಲಿತಾಂಶ ಟಾನಿಕ್ ಒದಗಿಸಲಿರುವುದಂತೂ ಖಂಡಿತಾ. ಇದು ಬಿಜೆಪಿ ಆತಂಕಪಡಲೇ ಬೇಕಾದ ವಿಚಾರವಾಗಲಿದೆ.