ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ ಕ್ಷೇತ್ರ ಅಮೇಠಿಯಲ್ಲಿ ಪೋಸ್ಟರ್ ರಾರಾಜಿಸುತ್ತಿದೆ.
ಸಾಮಾನ್ಯವಾಗಿ ಜನರ ಅಹವಾಲು ಕೇಳದ ಶಾಸಕರು, ಸಂಸದರ ವಿರುದ್ಧ ಜನರು ಪ್ರತಿಭಟನೆ ನಡೆಸುವುದು ಸಾಮಾನ್ಯ. ಇದೇ ರೀತಿ ಸದ್ಯಕ್ಕೆ ಈ ಕಡೆ ತಲೆಯೂ ಹಾಕದ ರಾಹುಲ್ ಗಾಂಧಿ ವಿರುದ್ಧ ಜನರು ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ’ ಎಂದು ಇಲ್ಲಿನ ಬೀದಿಗಳಲ್ಲಿ ಪೋಸ್ಟರ್ ರಾರಾಜಿಸುತ್ತಿದೆ. ಫೆಬ್ರವರಿಯಿಂದ ನಂತರ ರಾಹುಲ್ ಈ ಕಡೆಗೆ ಬಂದಿಲ್ಲ. ಇದರಿಂದಾಗಿ ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ನಿಂತಿವೆ ಎಂದು ಪೋಸ್ಟರ್ ನಲ್ಲಿ ಒಕ್ಕಣೆಯಿದೆ.
ಇದಕ್ಕೆ ಕಾಂಗ್ರೆಸ್ ಕಿಡಿ ಕಾರಿದ್ದು, ಇದೆಲ್ಲಾ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕಿತಾಪತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.