ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಗೆ ಹೋಗುತ್ತಿರುವಾಗ ಕರ್ನಾಟಕದ ಹುಡುಗಿಯೊಬ್ಬಳನ್ನು ಪ್ರೀತಿಸಿರುವುದರ ಬಗ್ಗೆ ಹೇಳಿದ್ದಾರೆ.
ಇವರು ಇದೇ ಮೊದಲಬಾರಿಗೆ ತಮ್ಮ ಪ್ರೀತಿಯ ವಿಚಾರ ಪ್ರಸ್ತಾಪಿಸಿದ್ದು. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಬಳಿ ಮೊದಲ ಪ್ರೇಮದ ಕುರಿತು ಪ್ರಶ್ನಿಸಿದ್ದಾಗ, ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವಾಗ ನಾನು ಒಬ್ಬ ಹುಡುಗಿಯನ್ನು ಕಂಡು ಪ್ರೀತಿಯಲ್ಲಿ ಬಿದ್ದಿದ್ದೆ. ಅದನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ. ಅನೇಕ ಜನರು ತಮ್ಮ ಮೊದಲ ಪ್ರೀತಿಯಲ್ಲಿ ಯಶಸ್ವಿಯಾದರೆ, ಕೆಲವರು ವಿಫಲರಾಗುತ್ತಾರೆ. ಆದರೆ ಫಸ್ಟ್ ಲವರ್ ಹೆಸರು ಮಾತ್ರ ಅವರ ಮನಸ್ಸಿನಲ್ಲಿ ಸದಾಕಾಲವಿರುತ್ತದೆ ಎಂದು ಹೇಳಿದ್ದು, ಆದರೆ ಅವರ ಮೊದಲ ಪ್ರೇಯಸಿಯ ಹೆಸರು ಮಾತ್ರ ಹೇಳಲೇ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ