ನವದೆಹಲಿ: ನಿವಾರ್ ಚಂಡಮಾರುತದಿಂದಾಗಿ ದಕ್ಷಿಣ ಭಾರತದಲ್ಲಿ ಮಳೆ ಭೀತಿ ಆವರಿಸಿದ್ದರೆ, ಉತ್ತರ ಭಾರತಕ್ಕೀತ ಶೈತ್ಯ ಗಾಳಿಯ ಭೀತಿ ಆವರಿಸಿದೆ.
ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದಿಂದ ಭಾರೀ ಮಳೆಯಾಗಿದೆ. ಇದು ಉಳಿದ ರಾಜ್ಯಗಳಲ್ಲೂ ಪ್ರಭಾವ ಬೀರಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ. ಕೇರಳದ ಕೆಲವು ಭಾಗಗಳಲ್ಲೂ ಮಳೆಯ ಸಂಭವವಿದೆ. ಇದರ ನಡುವೆಯೇ ಹವಾಮಾನ ಇಲಾಖೆ ಉತ್ತರದ ರಾಜ್ಯಗಳಿಗೆ ಶೈತ್ಯ ಗಾಳಿಯ ಎಚ್ಚರಿಕೆ ನೀಡಿದೆ. ಶುಕ್ರವಾರದಿಂದ ಭಾನುವಾರದ ನಡುವೆ ಶೈತ್ಯ ಗಾಳಿ ಅಬ್ಬರಿಸುವ ಲಕ್ಷಣವಿದ್ದು, ಇದರಿಂದ ಎಷ್ಟು ಜನರ ಜೀವಕ್ಕೆ ಕುತ್ತು ಬರುತ್ತದೋ ಎಂಬ ಆತಂಕ ಶುರುವಾಗಿದೆ.