ನವದೆಹಲಿ: ಯುಪಿಎ ಅಧಿಕಾರಕ್ಕೆ ಬಂದಾಗ ತಾನು ಪ್ರಧಾನಿಯಾಗದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ರನ್ನು ಪ್ರಧಾನಿಯಾಗಿ ಮಾಡಿದ್ದೇಕೆ? ಇದಕ್ಕೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮಚರಿತ್ರೆಯಲ್ಲಿ ಕಾರಣ ವಿವರಿಸಿದ್ದಾರೆ.
ಸಿಖ್ ಮೂಲದ ಮನಮೋಹನ್ ಸಿಂಗ್ ಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯಿರಲಿಲ್ಲ. ಸೋನಿಯಾ ಆಗಷ್ಟೇ ತನ್ನ 40 ವರ್ಷದ ಮಗನನ್ನು ಕಾಂಗ್ರೆಸ್ ಮುನ್ನಡೆಸಲು ತಯಾರುಗೊಳಿಸುತ್ತಿದ್ದರು. ಹೀಗಾಗಿ ಮನಮೋಹನ್ ರಿಂದ ಯಾವುದೇ ತೊಂದರೆಯಾಗದು ಎಂದು ಭಾವಿಸಿ ಅವರನ್ನೇ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದರು ಎಂದು ಒಬಾಮ ಬರೆದುಕೊಂಡಿದ್ದಾರೆ.