ದಲಿತರು ಮತ್ತು ಹಿಂದುಳಿದವರು ರಾಷ್ಟ್ರೀಯತಾವಾದಿಗಳಲ್ಲವೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಬುಧವಾರ ಪ್ರಶ್ನಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನ್ನಾಡಿದ್ದ ಪ್ರಧಾನಿ ಮೋದಿ, ಪಕ್ಷದ ಜತೆ ಗುರುತಿಸಿಕೊಂಡಿರುವ ಹಿಂದುಳಿದವರು ಮತ್ತು ದಲಿತರನ್ನು ರಾಷ್ಟ್ರೀಯತಾವಾದಿಗಳಾಗಿ ತರಬಯಸುತ್ತೇವೆ ಎಂದು ಹೇಳಿದ್ದರು.
ಅವರ ಈ ಹೇಳಿಕೆ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, ಹಾಗಾದರೆ ದಲಿತರು ಮತ್ತು ಹಿಂದುಳಿದವರು ರಾಷ್ಟ್ರೀಯವಾದಿಗಳಲ್ಲವೇ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸರಕಾರ ವಿರೋಧಿ ಅಲೆ ಮುಖ್ಯ ಅಂಶವಾಗಲಿದೆ. ಅದನ್ನು ಸೋಲಿಸಲು ದಾರಿಗಳನ್ನು ಕಂಡುಕೊಳ್ಳಬೇಕು ಎಂದು ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಪ್ರಧಾನಿ ಮೋದಿ ತಮ್ಮ ನಾಯಕರಿಗೆ ಎಚ್ಚರಿಕೆ ನೀಡಿದ್ದರು.