ನವದೆಹಲಿ: ರಾಹುಲ್ ಗಾಂಧಿ ಟ್ವಿಟರ್ ಸುತ್ತ ಸುತ್ತಿಕೊಂಡಿರುವ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ರಾಹುಲ್ ಗಾಂಧಿ ಪೇಜ್ ಗೆ ಸೇರ್ಪಡೆಯಾದ ಕೆಲವು ಮಂದಿಯ ಬಗ್ಗೆ ಅನುಮಾನ ವ್ಯಕ್ತಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಈ ಫಾಲೋವರ್ ಟ್ವಿಟರ್ ಪೇಜ್ ನಿಂದ ಇದುವರೆಗೆ ಟ್ವೀಟ್ ಗಳೂ ಬಂದಿಲ್ಲ. ಕಾಂಗ್ರೆಸ್ ಪಕ್ಷದ ಮೂಲದ ಪ್ರಕಾರ ರಾಹುಲ್ ಅಧಿಕೃತ ಪೇಜ್ ಗೆ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಸೇರ್ಪಡೆಯಾದವರ ಸಂಖ್ಯೆ 24.93 ಲಕ್ಷದಿಂದ 34 ಲಕ್ಷದವರೆಗೆ ಫಾಲೋವರ್ಸ್ ಹೆಚ್ಚಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ.
ಆದರೆ ರಾಹುಲ್ ಗಾಂಧಿ ಖಾತೆಯ ಬಗ್ಗೆ ಅಧ್ಯಯನ ನಡೆಸಿರುವ ಆಂಗ್ಲ ವಾಹಿನಿಯೊಂದು 50 ಕ್ಕೂ ಹೆಚ್ಚು ಫಾಲೋವರ್ ಗಳು ತಮ್ಮ ಖಾತೆಯಿಂದ ಇದುವರೆಗೆ ತಮ್ಮದೇ ಟ್ವೀಟ್ ಮಾಡಿಲ್ಲ ಎಂದು ತಿಳಿದು ಬಂದಿದೆ ಎನ್ನಲಾಗಿದೆ. ಹೀಗಾಗಿ ರಾಹುಲ್ ಫಾಲೋವರ್ ಗಳ ಅಸಲಿತನದ ಬಗ್ಗೆ ವಾಹಿನಿ ಅನುಮಾನ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ