Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಟಲಿ ಕನ್ನಡಕ ಧರಿಸಿ ಕೇದಾರನಾಥ ದರ್ಶನ: ಕಾಂಗ್ರೆಸ್ ಖಂಡನೆ

ಇಟಲಿ ಕನ್ನಡಕ ಧರಿಸಿ ಕೇದಾರನಾಥ ದರ್ಶನ: ಕಾಂಗ್ರೆಸ್ ಖಂಡನೆ
ನವದೆಹಲಿ , ಶನಿವಾರ, 21 ಅಕ್ಟೋಬರ್ 2017 (14:04 IST)
ನವದೆಹಲಿ: ಕೇದಾರನಾಥ ದೇಗುಲದ ಅಭಿವೃದ್ಧಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪಿ.ಎನ್.ಸಿಂಗ್ ಆರೋಪಿಸಿದ್ದಾರೆ.

ಕೇದಾರನಾಥ ದೇಗುಲ ವ್ಯಾಪ್ತಿಯಲ್ಲಿ ಮೋದಿ ಇಟಲಿ ಕನ್ನಡಕ ಧರಿಸಿ ದೇವರ ದರ್ಶನ ಪಡೆದಿದ್ದಾರೆ. ಇಟಾಲಿಯನ್ ಬ್ರ್ಯಾಂಡ್‌ ಬುಲ್ಗರಿ ಕನ್ನಡಕದ ಮೂಲಕ ನವ ಭಾರತದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. 2013ರಲ್ಲಿ ಗುಜರಾತ್ ಸರ್ಕಾರದ ಮೂಲಕ ಆ ರಾಜ್ಯದ ಸಿಎಂ ಆಗಿದ್ದ ತಾವು ಜಲಪ್ರಳಯದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್‌ ನಿರ್ಮಾಣಕ್ಕೆ ಮುಂದಾಗಿದ್ದೆವು. ಆದರೆ ಅಂದಿನ ಯುಪಿಎ ಸರ್ಕಾರ ನನಗೆ ಸಹಕರಿಸಲಿಲ್ಲ ಎಂದು ಪ್ರಧಾನಿ ಮೋದಿ ಆರೋಪವನ್ನು ಕಾಂಗ್ರೆಸ್‌ ನಾಯಕ ರಣದೀಪ್ ಸಿಂಗ್ ಸರ್ಜೇವಾಲ ಖಂಡಿಸಿದ್ದಾರೆ.

ಜಲಪ್ರಳಯದ ನಂತರ ಅಂದಿನ ಯುಪಿಎ ಸರ್ಕಾರ ಕ್ಯಾಬಿನೆಟ್ ಸಮಿತಿ ರಚಿಸಿತ್ತು. ಪುನರ್ ನಿರ್ಮಾಣಕ್ಕೆ 8 ಸಾವಿರ ಕೋಟಿ ನೀಡಿತ್ತು. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಉತ್ತರಾಖಂಡ್ ಪುನರ್ ನಿರ್ಮಾಣಕ್ಕೆ ನೆರವಾಗುವುದಾಗಿ ಹೇಳಿದ್ದಕ್ಕೆ ಉತ್ತರಖಾಂಡ್ ಸಿಎಂ ಕಚೇರಿಯಲ್ಲಿ ಯಾವುದೇ ದಾಖಲೆಗಳಿಲ್ಲ ಎಂದರು.

ಪ್ರಧಾನಿ ಮೋದಿ ಹೀಗೆ ಅಹಂಕಾರದ ಮಾತನಾಡಬಾರದು . ಕೇದಾರನಾಥೇಶ್ವರ ಭಕ್ತಿ ಕೇಳುತ್ತಾನೆಯೇ ವಿನಃ ನೆರವು ಬಯಸುವುದಿಲ್ಲ. ಅಧಿಕಾರ ನಡೆಸುವವರು ಅಹಂಕಾರದ ಮಾತನಾಡಿದ್ರೆ ಅಧಃಪತನವಾಗುತ್ತೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಮೊದಲು ಬೆಂಗಳೂರಿಗೆ