Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೂಟು ಬೂಟು ಹಾಕಿಕೊಂಡು ರಾಹುಲ್ ಗಾಂಧಿ ಫೋಟೋ ಹಾಕಿದ್ದೇ ತಪ್ಪಾಯ್ತು!

ಸೂಟು ಬೂಟು ಹಾಕಿಕೊಂಡು ರಾಹುಲ್ ಗಾಂಧಿ ಫೋಟೋ ಹಾಕಿದ್ದೇ ತಪ್ಪಾಯ್ತು!
ನವದೆಹಲಿ , ಗುರುವಾರ, 31 ಆಗಸ್ಟ್ 2017 (08:37 IST)
ನವದೆಹಲಿ: ನಾರ್ವೆ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿನ ಉದ್ಯಮಿಯೊಬ್ಬರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿದ್ದರು. ಅದೇ ಈಗ ಅವರಿಗೆ ಬಿಸಿ ತುಪ್ಪವಾಗಿದೆ.

 
ರಾಹುಲ್ ಗಾಂಧಿ ಈ ಫೋಟೋದಲ್ಲಿ ಸೂಟು ಬೂಟು ಹಾಕಿಕೊಂಡು ಪಕ್ಕಾ ಆಂಗ್ಲರ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ. ಭಾರತದಲ್ಲಿ ಸದಾ ಸಾಧಾರಣ ಕುರ್ತಾ, ಪ್ಯಾಂಟು ಹಾಕಿಕೊಂಡು ಓಡಾಡುವ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಸೂಟು ಬೂಟಿನ ಉಡುಗೆಯನ್ನು ಟೀಕಿಸುತ್ತಿರುತ್ತಾರೆ.

ಅದೇ ರಾಹುಲ್ ಗಾಂಧಿ ವಿದೇಶದಲ್ಲಿ ಈ ರೀತಿಯ ಉಡುಪು ಹಾಕಿಕೊಂಡಿರುವುದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಭಾರತದಲ್ಲಿ ಯಾಕೆ ಸಾಧಾರಣ ಉಡುಪು ಹಾಕಿಕೊಂಡು ನಾಟಕ ಮಾಡುತ್ತೀರಿ?’ ಎಂದು ವ್ಯಕ್ತಿಯೊಬ್ಬ ಚಾಟಿ ಬೀಸಿದ್ದಾರೆ. ಆದರೆ ಇನ್ನು ಕೆಲವರು ರಾಹುಲ್ ಪರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ.. ಶ್ರೀಲಂಕಾ ತಂಡದ ನಾಯಕನಾದರೆ ಅದೃಷ್ಟ ಕೈ ಕೊಡುವುದು ಗ್ಯಾರಂಟಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಬೇಡ: ಮಾಜಿ ಶಾಸಕ