Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈತರು ಡಿಜಿಟಲ್ ಪಾವತಿ ಮಾಡ್ತಾರೆಯೇ?: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ರೈತರು ಡಿಜಿಟಲ್ ಪಾವತಿ ಮಾಡ್ತಾರೆಯೇ?: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಅಹ್ಮದಾಬಾದ್ , ಸೋಮವಾರ, 25 ಸೆಪ್ಟಂಬರ್ 2017 (15:32 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ನಿಷೇಧದ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸರಕಾರದ ತಪ್ಪುಗಳಿಂದ ಸಾಮಾನ್ಯ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ. 
ರೈತರು ಡಿಜಿಟಲ್ ಪಾವತಿ ಮಾಡುತ್ತಾರೆಯೇ? ಅವರು ಹಣವನ್ನು ಬಳಸುತ್ತಿರುವುದರಿಂದ ಬಿಜೆಪಿ ಸರಕಾರದ ನೋಟು ನಿಷೇಧದಿಂದ ದೇಶದ ಆರ್ಥಿಕತೆಯೇ ಕುಸಿಯುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಗುಜರಾತ್ ಮಾಡೆಲ್ ಅಂದರೆ, ಕಾರ್ಪೋರೇಟ್ ಕಂಪೆನಿಗಳಿಗೆ ಭೂಮಿ, ವಿದ್ಯುತ್ ಪೂರೈಕೆ ಅಗತ್ಯವಾದ ಎಲ್ಲಾ ನೆರವು ನೀಡುವುದು. ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೆ ತಳ್ಳುವುದಾಗಿದೆ ಎಂದು ಕಿಡಿಕಾರಿದ್ದಾರೆ. 
 
ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೂರು ದಿನಗಳ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದು ಎರಡು ದಿನಗಳಿಗೂ ಹೆಚ್ಚು ಕಾಲ ಚುನಾವಣೆ ಪ್ರಚಾರದಲ್ಲಿ ತೊಡಗಲಿದ್ದಾರೆ. ಪಟಿದಾರ್ ಸಮುದಾಯದ ಹೃದಯಜಿಲ್ಲೆಯಾದ ಸೌರಾಷ್ಟ್ರವನ್ನು ರಾಹುಲ್ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
 
ನಗರದ ಪ್ರಸಿದ್ಧ ದ್ವಾರಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ನಂತರ ಪ್ರವಾಸ ಆರಂಭಿಸಿರುವ ರಾಹುಲ್, ಮೊದಲನೇ ದಿನದಂದು ದ್ವಾರಕಾ, ಜಾಮನಗರ್, ಮೊರ್ಬಿ, ಸುರೇಂದರ್ ನಗರ್ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ