Select Your Language

Notifications

webdunia
webdunia
webdunia
webdunia

ಚಾಲಕರ ಕಷ್ಟ ಆಲಿಸಲು ಲಾರಿ ಏರಿದ ರಾಗಾ

ಚಾಲಕರ ಕಷ್ಟ ಆಲಿಸಲು ಲಾರಿ ಏರಿದ ರಾಗಾ
dehali , ಮಂಗಳವಾರ, 23 ಮೇ 2023 (15:50 IST)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸಾರ್ವಜನಿಕರ ಮಧ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆಯುತ್ತಾ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದೀಗ ರಾಹುಲ್ ಗಾಂಧಿ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ವೇಳೆ ಹರಿಯಾಣದ ಅಂಬಾಲದಲ್ಲಿ ಲಾರಿ ಏರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳ ಸಂಚಾರ ಹೆಚ್ಚಿರುತ್ತದೆ. ಅದರಲ್ಲೂ ರಾತ್ರಿಯ ವೇಳೆ ಲಾರಿ ಚಾಲಕರು ಎದುರಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್ ಗಾಂಧಿ ಲಾರಿಯಲ್ಲಿ ಸಂಚರಿಸಿದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ರಾಹುಲ್ ಗಾಂಧಿ ಟ್ರಕ್ ಏರಿರುವ ವಿಡಿಯೋ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್​ನಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ದಂಪತಿಗೆ ಸುರ್ಜೇವಾಲ ಧನ್ಯವಾದ