ನೋಟು ನಿಷೇಧ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಭೀರವಾಗಿದ್ದಲ್ಲಿ, ನವೆಂಬರ್ 8 ರ ಮುಂಚಿನ ಬ್ಯಾಂಕ್ ವಿವರಗಳನ್ನು ನೀಡುವಂತೆ ಬಿಜೆಪಿ ನಾಯಕರಿಗೆ ಕೋರಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಸಂಸದರು, ಶಾಸಕರು ನವೆಂಬರ್ 8 ರ ನಂತರದ ಬ್ಯಾಂಕ್ ವಿವರಗಳನ್ನು ಜನೆವರಿ 1ರೊಳಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡುವಂತೆ ಆದೇಶಿಸಿದ್ದರು.
ಪ್ರಧಾನಮಂತ್ರಿ ಮೋದಿಯ ನಡೆ ತುಂಬಾ ಪ್ರಭಾವಿಯಾಗಿದೆ. ಆದರೆ, ನವೆಂಬರ್ 8 ರ ಮುಂಚಿನ ಬ್ಯಾಂಕ್ ವಿವರಗಳು ಕೋರಿದಲ್ಲಿ ತೊಂದರೆಯಾಗಲಿದೆ ಎಂದು ಭಾವಿಸಿ, ನವೆಂಬರ್ 8ರ ನಂತರದ ಬ್ಯಾಂಕ್ ವಿವರಗಳನ್ನು ಕೋರಿದ್ದಾರೆ ಎಂದು ಲೇವಡಿ ಮಾಡಿದೆ.
ಆರೆಸ್ಸೆಸ್ ಶಾಖೆಗಳಿಗೆ ಚೆಕ್ ಮೂಲಕ ದೇಣಿಗೆ ಹಣ ಪಾವತಿಸಲಾಗಿದೆಯೇ? ನವೆಂಬರ್ 8 ಕ್ಕಿಂತ ಮುಂಚೆ ಎಷ್ಟು ಜನ ಬಿಜೆಪಿ ಸಂಸದರು ಹಣವನ್ನು ಠೇವಣಿ ಮಾಡಿದ್ದಾರೆ? ಎನ್ನುವುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದೆ.
ಪಶ್ಚಿಮ ಬಂಗಾಳ ಮತ್ತು ಬಿಹಾರ್ ರಾಜ್ಯಗಳಲ್ಲಿ ಏನಾಗಿದೆ? ಎನ್ನುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಿದಲ್ಲಿ ಅವರು ನೋಟು ನಿಷೇಧದ ಬಗ್ಗೆ ಗಂಭೀರವಾಗಿದ್ದಾರೆ ಎಂದು ಭಾವಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.