ಬೆಂಗಳೂರು ನಗರದ ಖಾಸಗಿ ಲ್ಯಾಬ್ ಒಂದರ ಎಡವಟ್ಟಿನಿಂದ ಆರೋಗ್ಯ ಇಲಾಖೆ ಕಂಗಾಲಾಗಿದ್ದು, ಟೆಸ್ಟಿಂಗ್ ಗೆ ಬಂದಿದ್ದ ವ್ಯಕ್ತಿಯ ಡೇಟಾವನ್ನು ಲ್ಯಾಬ್ ಸಂಗ್ರಹಿಸಿರಲಿಲ್ಲ ಎಂದು ಹೇಳಲಾಗಿದೆ. ಡಿಸೆಂಬರ್ 28 ರಂದು ಖಾಸಗಿ ಲ್ಯಾಬ್ ಗೆ ಟೆಸ್ಟಿಂಗ್ ಗೆ ವ್ಯಕ್ತಿ ಓರ್ವ ಬಂದಿದ್ದು, ನಂತರ ಡಿಸೆಂಬರ್ 29 ರಂದು ಟೆಸ್ಟ್ ನಲ್ಲಿ ಆ ವ್ಯಕ್ತಿಗೆ ಓಮಿಕ್ರಾನ್ ಧೃಡವಾಗಿದೆ.
ಆ ವ್ಯಕ್ತಿಯ ಡೇಟಾ ಇಲ್ಲದೇ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಸೋಂಕಿತನ ಡೇಟಾ ಇಲ್ಲದೇ, ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಸೋಂಕಿತನ ಫ್ರೈಮರಿ ಕಾಂಟ್ಯಾಕ್ಟ್ ಎಷ್ಟು ಎನ್ನುವುದನ್ನು ಪತ್ತೆ ಹಚ್ಚಲು ಯಾವುದೇ ಮಾಹಿತಿ ಸಿಗದೇ ಆರೋಗ್ಯ ಇಲಾಖೆ ಕಂಗಾಲಾಗಿದೆ.