Publish Date: Thu, 25 Feb 2021 (09:55 IST)
Updated Date: Thu, 25 Feb 2021 (09:56 IST)
ಭೋಪಾಲ್ : ಮಿಷನರಿ ಶಾಲೆಯ ಪ್ರಾಂಶುಪಾಲರೊಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ತನ್ನ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.
ಶಿಕ್ಷಕಿ ಮಧ್ಯಮ ವರ್ಗದವರಾಗಿದ್ದು, ಅವಳ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ತನ್ನ ಧರ್ಮಕ್ಕೆ ಮತಾಂತರವಾದರೆ ಸಂಬಳವನ್ನು ಹೆಚ್ಚಿಸುವ ಆಮಿಷಯೊಡ್ಡಿದ್ದಾರೆ. ಆದರೆ ಶಿಕ್ಷಕಿ ಅದನ್ನು ನಿರಾಕರಿಸಿದ್ದಕ್ಕೆ ಆಕೆಗೆ ಸಂಬಳ ನೀಡದೆ ಕೆಲಸದಿಂದ ವಜಾಗೊಳಿಸಿದ್ದಾರೆ.
ಹೀಗಾಗಿ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪ್ರಾಂಶುಪಾಲರು ವಿದ್ಯಾರ್ಥಿಗಳಿಗೂ ಇಂತಹ ಆಮಿಷಯೊಡ್ಡಿದ್ದು ತಿಳಿದು ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ.